Choose a track to play
Single / Track
ಕಣ್ಣಿಗೆ ಕಾಣದ ಪ್ರೀತಿ
ಅಲ್ಲಿ ಕಂಡರೂ ಕಾಣದ ಪ್ರೀತಿ
ಸಿಕ್ಕದೇ ಹೋಗುವ ಪ್ರೀತಿ
ಇಲ್ಲಿ ಸಿಕ್ಕರೂ ಸಿಗದ ಪ್ರೀತಿ
ಪ್ರತೀ ಸುಳ್ಳಲ್ಲೂ ನಿಜವುಂಟು ಇಲ್ಲಿ
ಪ್ರತೀ ನಿಜದಲ್ಲೂ ಸುಳ್ಳುಂಟು ಇಲ್ಲಿ
ಕಣ್ಣಿಗೆ ಕಾಣದ ಪ್ರೀತಿ
ಅಲ್ಲಿ ಕಂಡರೂ ಕಾಣದ ಪ್ರೀತಿ
ನೀ
ಪ ಗ
ಮಪನೀಪಾಪಮಪ
ಮಪನೀಪಾಪಪ
ಮಪ ಮಪ ಮಪ ಗಮಗಮಾಗ
ಗಗಗ ನಿಸರಿಸಗಾಗ ಸಾನಿಸಗಮಾಪಾಪ ಗಪಮನಿ
ಮಪಸಾನಿಪ ಮಪನಿನಿಪ ಮಾಪಮಗಸ ನಿಸಗಗಸ
ಯಾರಿಂದ ಯಾರಿಗೂ
ಎಲ್ಲಿಂದ ಎಲ್ಲಿಗೂ
ಈ ಪ್ರೀತಿಯ ಪಯಣವು
ಒಂದೊಂದು ಮನಸಲ್ಲೂ ಒಂದೊಂದು ಗುರುತಿದ್ದು ಹಾಡಾಗದ ಕವನವು
ಸುಳ್ಳಾದರೂ ನಿಜ ಅನಿಸುವ
ನಿಜವಾದರೂ ಸುಳ್ಳು ಅನಿಸುವ
ಜೊತೆಯಿದ್ದರೂ ಒಂಟಿ ಅನಿಸುವ
ಒಂಟಿಯಲೂ ಜೊತೆ ಅನಿಸುವ
ಪ್ರೀತಿಯ ಮಾಯೆಯಿದು
ಕಣ್ಣಿಗೆ ಕಾಣದ ಪ್ರೀತಿ
ಅಲ್ಲಿ ಕಂಡರೂ ಕಾಣದ ಪ್ರೀತಿ
ಪ್ರೀತಿಗೂ ಸ್ವಾರ್ಥಕ್ಕೂ ನಡುವಲ್ಲಿ ಹೋರಾಟ
ಅದು ಯಾವ ಅನುಬಂಧವೋ
ಸನಿಹಕ್ಕೂ ವಿರಹಕ್ಕೂ ನಡುವಲ್ಲಿ ಹುಡುಕಾಟ
ಅದು ಏನು ಸಂಬಂಧವೋ
ಈ ಪ್ರೀತಿಗೆ ಎಷ್ಟೋ ಮುಖವಿದೆ
ಪ್ರತೀ ನೋವಲೂ ಹೊಸ ಸುಖವಿದೆ
ಪ್ರತೀ ತವಕಕೂ ಒಂದು ಕಥೆ ಇದೆ
ಪ್ರತೀ ಕಥೆಯಲೂ ಸೋಲು ಗೆಲುವಿದೆ
ಪ್ರೀತಿಯ ಮಾಯೆ ಇದು
ಕಣ್ಣಿಗೆ ಕಾಣದ ಪ್ರೀತಿ
ಅಲ್ಲಿ ಕಂಡರೂ ಕಾಣದ ಪ್ರೀತಿ
ಪ್ರತೀ ಸುಳ್ಳಲ್ಲೂ ನಿಜವುಂಟು ಇಲ್ಲಿ
ಪ್ರತೀ ನಿಜದಲ್ಲೂ ಸುಳ್ಳುಂಟು ಇಲ್ಲಿ
ಕಣ್ಣಿಗೆ ಕಾಣದ ಪ್ರೀತಿ
ಅಲ್ಲಿ ಕಂಡರೂ ಕಾಣದ ಪ್ರೀತಿ