Choose a track to play
ಓ ಅಲೆಮಾರಿ ನಾ ಅಲೆಮಾರಿ
ತರಗೆಲೆಯ ಹಾಗೆ
ಅಲೆವಾ ಅಲೆಮಾರಿ
ಏ ಅಲೆಮಾರಿ ನಾ ಅಲೆಮಾರಿ
ಅವನಾಡಿಸೋ ಹಾಗೆ
ನಡೆವ ಅಲೆಮಾರಿ
ಏಳುತ ಬೀಳುತ ಹಾರುತ ಜಿಗಿಯುತ
ಈಜಾಡುವ ನಾ ಅಲೆಮಾರಿ
ನಕ್ಷೆಯೇ ಇಲ್ಲದೆ
ಭೂಮಿಯ ಸುತ್ತೋ
ವಿಳಾಸವೇ ಇಲ್ಲದ ಅಲೆಮಾರಿ
ಬದುಕಿನ ಜಟಕಾ ಬಂಡೀಯ
ನಡೆಸುವನೇ ಆ ಸಾಹೇಬ
ಅವನು ಹುರ್ರೆಂದರೆ ಸಾಕು
ಸೋಲದೆ ಓಡುವೆ ಮುಂದಕ್ಕೆ ಸಾಗಿ
ಅಲೆಮಾರಿ ನಾ ಅಲೆಮಾರಿ
ತರಗೆಲೆಯ ಹಾಗೆ
ಅಲೆವಾ ಅಲೆಮಾರಿ
ಏ ಅಲೆಮಾರಿ ನಾ ಅಲೆಮಾರಿ
ಅವನೆಡೆಗೆ ಸಾಗುವ ದಾರಿಯೇ ನನ್ನ ದಾರಿ
ಓ ಬಂಧಿಸುವ ಬಂಧನಗಳ ಸರಪಳಿಗಳ ಬಿಡಿಸುತ್ತಾ
ನಾನೆಂಬ ಗುಹೆಯೊಳಗೆ ಬೆಳಕನ್ನು ಅರಸುತ್ತಾ
ಈ ದೇಹದ ಪಂಜರ ಮೀರಿ
ಸುಂಟರಗಾಳಿಗಳನ್ನು ತೂರಿ
ಮಣ್ಣಿನ ಮನೆ ಇಲ್ಲ ಎನಗೆ
ಕಾಲಡಿ ಮಣ್ಣೇ ಮನೆ ಮಠ ಎಲ್ಲ
ನೆನ್ನೆಗಳ ನೆನಪೇ ಇಲ್ಲ
ನಾಳೆಗಳ ಚಿಂತೆ ಇಲ್ಲ
ಭುಜಗಳ ಮೇಲೆ ಭಾರ ಇಲ್ಲ
ವ್ಯಥೆಗಳ ಕಣ್ಣೀರು ಇಲ್ಲ
ಸೋಲು ಗೆಲುವೆಂಬುದೇ ಇಲ್ಲ
ಇನ್ನೊಬ್ಬರ ಹಂಗೇ ಇಲ್ಲ
ನಾನ್ಯಾರಿಗೂ ಬೇಡ ಎಂಬೊ ತಿರಸ್ಕಾರದ ಭಯವೇ ಇಲ್ಲ
ಅಲೆಮಾರಿ ನಾ ಅಲೆಮಾರಿ
ತರಗೆಲೆಯ ಹಾಗೆ ಅಲೆವ ಅಲೆಮಾರಿ
ಏ ಅಲೆಮಾರಿ ನಾ ಅಲೆಮಾರಿ
ಅವನೆಡೆಗೆ ಸಾಗುವ ದಾರಿಯೇ ನನ್ನ ದಾರಿ
ಓ ಅಲೆಮಾರಿ ನಾ ಅಲೆಮಾರಿ
ತರಗೆಲೆಯ ಹಾಗೆ
ಅಲೆವಾ ಅಲೆಮಾರಿ
ಏ ಅಲೆಮಾರಿ ನಾ ಅಲೆಮಾರಿ
ಅವನೆಡೆಗೆ ಸಾಗುವ ದಾರಿಯೇ ನನ್ನ ದಾರಿ
ಏಳುತ ಬೀಳುತ ಹಾರುತ ಜಿಗಿಯುತ
ಈಜಾಡುವ ನಾ ಅಲೆಮಾರಿ
ನಕ್ಷೆಯೇ ಇಲ್ಲದೆ ಭೂಮಿಯ ಸುತ್ತೋ
ವಿಳಾಸವೇ ಇಲ್ಲದ ಅಲೆಮಾರಿ
ಬದುಕಿನ ಜಟಕಾ ಬಂಡಿಯ ನಡೆಸುವನೇ ಆ ಸಾಹೇಬ
ಅವನು ಹುರ್ರೆಂದರೆ ಸಾಕು
ಸೋಲದೆ ಓಡುವೆ ಮುಂದಕ್ಕೆ ಸಾಗಿ
ಅಲೆಮಾರಿ ನಾ ಅಲೆಮಾರಿ
ತರಗೆಲೆಯ ಹಾಗೆ
ಅಲೆವಾ ಅಲೆಮಾರಿ
ಓ ಅಲೆಮಾರಿ ನಾ ಅಲೆಮಾರಿ
ಅವನಾಡಿಸೋ ಹಾಗೆ
ನಡೆವ ಅಲೆಮಾರಿ