Choose a track to play

Single / Track
ಮುಖದಲ್ಲಿ ಏನಿದೆ?
ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ?
ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ?
ಮನಸಲ್ಲೆಲ್ಲ ಇದೆ
ಮುಖವಾಡದ ಬದುಕೇತಕೆ
ನಾವು ಹೋಗೋ ದಾರಿ, ಓ
ಎಲ್ಲ ಕಲ್ಲು ಮುಳ್ಳು, ಓ
ಹೂವು ಹಾಸೋರು ಯಾರು ನೀ ಹೇಳು
ಲೋಕಾನೆ ಹೀಗಿದೆ ಯಾಕ್ಹಿಂಗೆ ಅಡ್ತಿದೆ
ಲೋಕಾನೆ ಹೀಗಿದೆ ಯಾಕ್ಹಿಂಗೆ ಅಡ್ತಿದೆ
ಬೆನ್ತಟ್ಟದೆ ಯಾಕೆ ನಗುತಿದೆ
ಕಾಲು ಎಳೆಯೋ ಲೋಕ
ಕಲೆ ತುಳಿಯೋ ಲೋಕ
ಗುರಿ ತಲುಪೋದು ಹೇಗೆ ನೀ ಹೇಳು
ಆಸೆತೋರೋ ಕಾಮನಬಿಲ್ಲೆ
ರಂಗು ರಂಗಿನ ಲೋಕವು ನಿನಂತೆಯೇ
ರಂಗ ಮಂಚ ಲೋಕಕೆ ಯಾಕೆ
ಬಣ್ಣ ಹಾಕದೆ ನಟಿಸೋ ನಾಟಕಿಯಕೇ
ಮಾಮರದ ಚಿಗುರಿನಿಂದ ಕೋಗಿಲೆ ಹಾಡು
ಲೋಕದ ಚಪ್ಪಾಳೆ ಇದ್ರೆ ನನ್ನ ಹಾಡು
ಕಾಲು ಎಳೆಯೋ ಲೋಕ, ಓ
ಕಲೆ ತುಳಿಯೋ ಲೋಕ, ಓ
ಗುರಿ ತಲುಪೋದು ಹೇಗೆ ನೀ ಹೇಳು
ಮುಖದಲ್ಲಿ ಏನಿದೆ?
ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ?
ಮನಸಲ್ಲೆಲ್ಲ ಇದೆ
ಮುಖವಾಡದ ಬದುಕೇತಕೆ
ಕಣ್ಣು ಮುಚ್ಚಿ ಕಾಣುವ ಕನಸು
ಕಣ್ಣು ತೆರೆಯದ ಲೋಕದಲ್ಲಿ ಮಾಯವೇ
ಮರೀಚಿಕೆಯೇ ಲೋಕದ ಮಾತು
ಮಾಯಗಾರನ ಆಟವೋ ಪಾಠವೋ
ಮಾಮರದ ಚಿಗುರಿನಿಂದ ಕೋಗಿಲೆ ಹಾಡು
ಈ ಜನರ ಪ್ರೀತಿಗಾಗಿ ನನ್ನ ಹಾಡು
ಕಾಲು ಎಳೆಯೋ ಲೋಕ, ಓ
ಕಲೆ ತುಳಿಯೋ ಲೋಕ, ಓ
ಗುರಿ ತಲುಪೋದು ಹೇಗೆ ನೀ ಹೇಳು
ಮುಖದಲ್ಲಿ ಏನಿದೆ?
ಮನಸಲ್ಲೆಲ್ಲ ಇದೆ