Elige una pista para reproducir
Sencillo / Pista
ನನ್ನಾಸೆ ಮಲ್ಲಿಗೆ ನೀ ಬಾಡದಿರು
ನಮ್ಮೂರ ಜ್ಯೋತಿಯೇ ನೀ ಆರದಿರು
ಬಂಗಾರದಂಥ ಬೊಂಬೆಯೇ
ನನ್ನಾಸೆ ಮಲ್ಲಿಗೆ ನೀ ಬಾಡದಿರು
ನಮ್ಮೂರ ಜ್ಯೋತಿಯೇ ನೀ ಆರದಿರು
ಬಂಗಾರದಂಥ ಬೊಂಬೆಯೇ
ಏಳು ಏಳು ಜನ್ಮವು ನೀ ನನ್ನ ತಂಗಿಯು
ಉಸಿರಲ್ಲಿ ತುಂಬಿದ ಕರುಳಿನ ಬಂಧಿಯು
ಹೋಗಿ ಬಾರೆ ನನ್ನ ಪ್ರಾಣ ಜ್ಯೋತಿಯೇ
ಅಕ್ಕರೆಯ ಅಣ್ಣನು ಕಣ್ಣ ನೀರಲಿ
ಓ, ಸಕ್ಕರೆಯ ತಂಗಿ ನೀ ಹೊರಟೆ ತೇರಲಿ
ನೀನು ಹೊರಟ ಊರಿಗೆ ದಾರಿ ಹೇಳಮ್ಮ
ಆ ಬೀದಿಯಲ್ಲಿ ಕಲ್ಲು - ಮುಳ್ಳಿದ್ರೆ ಕೂಗಮ್ಮ
ಕರುಳ ಗೆಳತಿಯಲ್ಲ ನೀ ನನ್ನ ಹೆತ್ತ ತಾಯಿಯೇ
ಪ್ರೀತಿ ಹೊತ್ತ ಕಂದನ ಒಂಟಿ ಮಾಡಿ ಹೋದೆಯೇ
ನಾ ಬರುವೆ ನಿನ್ನ ಹಿಂಬಾಲಿಸಿ
ನನ್ನಾಸೆ ಮಲ್ಲಿಗೆ ನೀ ಬಾಡದಿರು
ನಮ್ಮೂರ ಜ್ಯೋತಿಯೇ ನೀ ಆರದಿರು
ಬಂಗಾರದಂಥ ಬೊಂಬೆಯೇ