Elige una pista para reproducir
Sencillo / Pista
ನೆನ್ನೆ ತನಕ
ನೆನ್ನೆ ತನಕ
ತಿಳಿಯದು ಪ್ರೇಮದ ಊರಿನ ದಾರಿ
ಕಂಡ ಒಡನೇ
ಒಮ್ಮೆ ನಿನ್ನನ್ನೇ
ನಡೆಯುವ ಆಸೆಯು ನಾ ಜೊತೆ ಸೇರಿ
ಅಲ್ಲಿ ಮೈಲಿಗಲ್ಲು ನಿಂತ ಹಾಗೆ ನೀನೇ ನಿಂತಿದ್ದೆ
ಇನ್ನು ಮುಂದೆ ಎಲ್ಲಾ ನೀನೇನೆ
ನಂದು ಅನ್ನೋದೆಲ್ಲಾ ನಿಂದೇನೆ
ಪ್ರೇಮ ಪ್ರೇಮ ನಿಂಗೆ ಪ್ರಣಾಮ
ನಾ ಇನ್ನು ಮುಂದೆ ನಿನ್ನ ಗುಲಾಮ
ನೆನ್ನೆ ತನಕ
ನೆನ್ನೆ ತಂಕ
ಸೋನೆಯಲ್ಲಿ ಸಿಕ್ಕಿಕೊಂಡ ಅರಗಿಣಿಯ ತರಹ
ನನ್ನ ಮನಸು ನೆನೆದ್ಹೋಯ್ತು
ಸಂತೆಯಲ್ಲಿ ತಪ್ಪಿ ಹೋದ ಮಗು ತರಹ ಮನಸು
ಕಂಡ ಕ್ಷಣವೇ ಕಳೆದ್ಹೋಯ್ತು
ಮೊನ್ನೆ ಕನಸಿನ ಲ್ಲೂ ಬೊಗಸೆ ತುಂಬಾ ಪ್ರೀತಿ ತಂದಿದ್ದೆ
ಇನ್ನು ಮುಂದೆ ಎಲ್ಲಾ ನೀನೇನೆ
ನೀನು ಇದ್ರೆ ಎಲ್ಲಾ ಚಂದಾನೆ
ನೀನೇ ನನ್ನ ಪ್ರತಿ ಮುಂಜಾನೆ
ನನ್ನ ಮಾತು ನಿಜಾ ನಿನ್ನಾಣೆ
ನನ್ನ ಭುಜ ನಿನ್ನ ಭುಜ ತಗುಲಿದರೆ ಪುಳಕ
ಒಳಗೊಳಗೇ ಖುಷಿ ಪಡುವೆ
ನನ್ನ ಜೀವ ಇರೋ ತಂಕ ಮರೆಸುವೆನು ತವಕ
ಕೊನೆವರೆಗೂ ಜೊತೆಗಿರುವೆ
ನಿನ್ನ ಸೂಜಿ ಗಲ್ಲು ಕಣ್ಣಿನಿಂದ ನನ್ನೇ ಕೂಡಿದ್ದೆ
ಇನ್ನು ಮುಂದೆ ಎಲ್ಲಾ ನೀನೇನೆ
ಎಲ್ಲಾ ಜನ್ಮ ನಿನ್ನಾ ಜೊತೆನೆ
ನಿನ್ನ ಪ್ರೀತಿ ನನ್ನ ಪುಣ್ಯಾನೆ
ಪ್ರೀತಿಗೂನು ನಾವೇ ಇಷ್ಟನೇ
ಕೊನೆ ತನಕ
ಕೊನೆ ತನಕ