Elige una pista para reproducir
ಕುಂಬಾರಕಿ ಈಕೀ ಕುಂಬಾರಕಿ
ಕುಂಬಾರಕಿ ಈಕೀ ಕುಂಬಾರಕಿ
ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಚಿನ್ನ ಎಂಬುವ ಮಣ್ಣನು ತರಸಿ
ತನು ಎಂಬುವ ನೀರನು ಹಣಿಸಿ
ಮನ ಎಂಬುವ ಹುದಲನು ಕಲಸಿ
ಗುಣ ಎಂಬುವ ಸೂಸನ್ನು ಹಾಕಿ
ಕುಂಬಾರಕಿ ಈಕೀ ಕುಂಬಾರಕಿ
ಕುಂಬಾರಕಿ ಈಕೀ ಕುಂಬಾರಕಿ
ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಆಚಾರ ಎಂಬುವ ಆವಿಗೆ ಮುಚ್ಚಿ
ಅರಿವು ಎಂಬುವ ಬೆಂಕಿಯ ಹಚ್ಚಿ
ಆಚಾರ ಎಂಬುವ ಆವಿಗೆ ಮುಚ್ಚಿ
ಅರಿವು ಎಂಬುವ ಬೆಂಕಿಯ ಹಚ್ಚಿ
ಸಾವಿರ ಕೊಡಗಳ ಸುಟ್ಟು ಇಂದು
ಸಂತಿಗೆ ಒಯ್ದು ಮಾರುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಕುಂಬಾರಕಿ ಈಕೀ ಕುಂಬಾರಕಿ
ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಮೂರು ಕಾಸಿಗೊಂದು ಉಡಕಿಯ ಮಾರಿ
ಆರು ಕಾಸಿಗೊಂದು ಗಡಗಿಯ ಮಾರಿ
ಮೂರು ಕಾಸಿಗೊಂದು ಉಡಕಿಯ ಮಾರಿ
ಆರು ಕಾಸಿಗೊಂದು ಗಡಗಿಯ ಮಾರಿ
ವಸುಧೆಯೊಳು ಶಿಶುನಾಳಧೀಶನ
ಮುಂದೆ ಧ್ಯಾನದ ಮಗಿಯೊಂದು ಇಡುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಕುಂಬಾರಕಿ ಈಕೀ ಕುಂಬಾರಕಿ
ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವಾಕಿ
ಕುಂಬಾರಕಿ ಈಕೀ ಕುಂಬಾರಕಿ