Elige una pista para reproducir
Sencillo / Pista
ಹೂವಿನ ಸಂತೆಗೆ ಬಂದಿರೋ ಗಾಳಿಗೆ
ನಿನ್ನದೇ ಯೋಚನೆ, ನಿನ್ನದೇ ಯೋಚನೆ
ಕಣ್ಣಿನ ಅಂಚಿಗೆ ಬಂದಿರೋ ಮೋಡಕೆ
ನಿನ್ನದೇ ಯೋಚನೆ, ನಿನ್ನದೇ ಯೋಚನೆ
ಮನದಾ ಮರೆಯ ಕಿಟಕಿಯಿಂದ
ನುಸುಳಿ ಬಂದ ಬಿಸಿಲು ನೀನೇ
ಸನಿಹ ಬಂದು ತಿಳಿಸು ಬೇಗ
ನಿನಗೂ ಉಂಟೇ ವಿರಹ ಬೇನೆ
ರೂಪವ ತಾಳಿದ ನೀನೇ ನನ್ನ ಕಲ್ಪನೆ
ಬೊಗಸೆಯಲ್ಲಿ ಅರಳೋ ನಿನ್ನ
ಮೊಗವ ನೋಡಿ ಹೊಳೆಯುತ್ತೇನೆ
ಹತ್ತು ಹಲವು ರೀತಿಯಿಂದ
ಒಲವಾ ಹೇಳು ಮರೆಯಾದೇನೆ
ಜೀವದ ಪುಸ್ತಕ ನಿನಗೆ ಇನ್ನೂ ಅರ್ಪಣೆ
ಹೂವಿನ ಸಂತೆಗೆ ಬಂದಿರೋ ಗಾಳಿಗೆ
ನಿನ್ನದೇ ಯೋಚನೆ, ನಿನ್ನದೇ ಯೋಚನೆ
ಕಣ್ಣಿನ ಅಂಚಿಗೆ ಬಂದಿರೋ ಮೋಡಕೆ
ನಿನ್ನದೇ ಯೋಚನೆ, ನಿನ್ನದೇ ಯೋಚನೆ
ಸೂಚನೆ