Elige una pista para reproducir
Sencillo / Pista
ಏರುಪೇರಾಯಿತು ನೆಟ್ಟಗಿದ್ದ ನನ್ನ ಹೃದಯ
ಇಲ್ಲಿಂದ ಶುರು ಪ್ರೀತಿ ವ್ಯವಸಾಯ
ಬಾನಲಿ ಬದಲಾಗೋ ಬಣ್ಣವೇ ಭಾವನೆ
ಹೃದಯವು ಹಗುರಾಗಿ ಹಾರುವ ಸೂಚನೆ
ಮನದ ಹೂಬನದಿ ನೆನಪೇ ಹೂವಾಯ್ತು
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ
ಮನದಿ ಏನೋ ಹೊಸ ಗಲಭೆ ಶುರುವಾಗಿದೆ
ಮರೆತೆ ಏಕೆ ಬಳಿ ಬಂದು ಸರಿ ಮಾಡದೆ
ಗೆಳತಿ ನನ್ನ ಕೆಣಕಿ ತೆರೆದೇ ಮನದ ಕಿಟಕಿ
ಕರುಣಿಸು ಪ್ರೇಮಧಾರೆ ಬಯಕೆಯ ತೋರದೆ
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ
ಸರದಿಯಲ್ಲಿ ಹೊಸ ಬಯಕೆ ಸರಿದಾಡಿದೆ
ಹರಿಸಿ ಬೇಗ ಕರೆ ಮಾಡು ತಡ ಮಾಡದೆ
ಹುಡುಕಿ ನನ್ನ ಹುಡುಕಿ ನಟಿಸು ಕಣ್ಣ ಮಿಟುಕಿ
ಗಮನಿಸು ಪ್ರೇಮ ಭಾಷೆ ಪದಗಳ ನೋಡದೆ
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ
ಬಾನಲಿ ಬದಲಾಗೋ ಬಣ್ಣವೇ ಭಾವನೆ
ಹೃದಯವು ಹಗುರಾಗಿ ಹಾರುವ ಸೂಚನೆ
ಮನದ ಹೂಬನದಿ ನೆನಪೇ ಹೂವಾಯ್ತು
ಅದೇ ಮಾತು ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ ನಗೆ ಬಾಣ ಎದೆಯಲಿ ನಾಟಿದೆ