Elige una pista para reproducir

Sencillo / Pista
(ಅಮವಾಸ್ಯೆಯಂದು ಚಂದ್ರ ಕಂಡಿದ್ದಾನೆ
ಶುಭವೊ ಅಶುಭವೊ ತಿಳಿಯದು
ಹುಣ್ಣಿಮೆಯಂದು ಈತ ಜೊತೆಗಿದ್ದಾನೆ
ಪ್ರೀತಿಯ ಉಪಶಮನದ ಮಜಲಿದು)
ಕರಗಿದ ಬಾನಿನಲ್ಲಿ ಮೂಡಿಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ
ಬಾಡಿದ ಈ ಮನ ಬಯಸುವ ಹುಡುಗನು ನೀನ
ಅರಳುವ ಈ ಮನ ಮೊಗ್ಗಾದೆ ನಾ
ಕಾಡು ಮಳೆಯನು, ಮಳೆಯ ನೆನಪನು
ನೆನಪ ಹಸಿವನು ಮರೆಸು ಬಾ
ಸಿಗುವ ಒಲವನು, ಒಲವ ಕನಸನು ಕನಸ ಉಡುಪನು ತೊಡಿಸು ಬಾ
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ
ನೆರಳಿನ ನೆನಪಲಿ ಹೋಲುವ ಗೆಳೆಯನೆ
ಬೆಳಗಿದೆ ಬದುಕನೆ ಮೂಡಿಸಿ ಕಲ್ಪನೆ
ನೀರ ಒಳಗೆ ಅಳುವ ಮೀನು ನಾ
ಹನಿಯ ಒರಸೋ ಬೆರಳು ನೀನೇ ನಾ
ನಲುಗಿ ಬಾಡೋ ಹೂವು ನಾನಾದೆ
ಮೆಲ್ಲ ಒಳಗೆ ನುಸುಳಿ ನೀ ಬಂದೆ
ಹಗಲ ಶಶಿಯು ನೀನಾದೆಯ
ಕಾಡು ಮಳೆಯನು, ಮಳೆಯ ನೆನಪನು
ನೆನಪ ಹಸಿವನು ಮರೆಸು ಬಾ
ಸಿಗುವ ಒಲವನು, ಒಲವ ಕನಸನು ಕನಸ ಉಡುಪನು ತೊಡಿಸು ಬಾ
ಕರಗಿದ ಬಾನಿನಲ್ಲಿ ಮೂಡಿ ಬಾ ನೀ ಚಂದಿರ
ನಸುಕಿನ ಕನಸಿನಲ್ಲಿ ನಿನ್ನ ನೆನಪೇ ಸುಂದರ
ಚದುರಿದ ಮೊಡವ ಕೂಡಿಸೊ ಬಿಂದುವೆ
ನನ್ನಯ ನೀರವ ತೊರೆಯಲು ಸಾಧ್ಯವೇ
ಸುರಿವ ಮಳೆಯ ಪರಿವೆ ನನಗಿಲ್ಲ
ನಿನ್ನ ಹೊರತು ಬೇರೆ ಸೊಗಸಿಲ್ಲ
ಸರಿದ ಸೂರ್ಯ ಕಿರಣ ಬೀರೊಲ್ಲ
ನಿನ್ನ ಹೊಳಪೆ ಮೀರೊ ಮಿನುಗಿಲ್ಲ
ಇರುಳ ದೀಪ ನೀನಾದೆಯ
ಕಳೆದ ದಿನವನು ಪಡೆದ ನೋವನು
ಕಾಡು ಮಳೆಯನು, ಮರೆಸು ಬಾ
ಸಿಗುವ ನಗುವನು, ನಾಳೆ ಕನಸನು ಒಲವ ಉಡುಪನು ತೊಡಿಸು ಬಾ