Elige una pista para reproducir
Sencillo / Pista
ಲಾಲಿ ಸುವ್ವಾಲಿ
ಹಾಡೆಲ್ಲಾ ಲಾಲಿ
ನನ್ನ ಚೆಲುವಿಗೆ ಸೊಗಸಾದ ಲಾಲಿ
ಮನಕೆ ಮುಗಿಲಿನ ರಾಜಕುಮಾರಿ
ಕನಸಾಗೆ ಬರುವೆ ನಾ
ಕೇಳೇ ಚಿಂಗಾರಿ
ಲಾಲಿ ಸುವ್ವಾಲಿ
ಹಾಡೆಲ್ಲಾ ಲಾಲಿ
ನನ್ನ ಚೆಲುವಿಗೆ ಸೊಗಸಾದ ಲಾಲಿ
ಒಂದು ಮಾತಾಡೋ ಹೂವ ಕಂಡೆ ನಾನು
ಬಾಡದಂಥ ಪ್ರೀತಿಯ ಹೂವು ನೀನು
ನಿನ್ನ ಮನಸಾಗೆ ಎಲ್ಲಾ ಬರಿ ಜೇನು
ಇನ್ನು ಇದಕಿನ್ನ ದೊಡ್ಡದಲ್ಲಾಏನು
ನನ್ನ ಬಾಳ ಸಂತೋಷವೆಲ್ಲಾ ನೀನೆ
ನನ್ನ ಹಾಡು ಸಂಗೀತವೆಲ್ಲಾ ನೀನೆ
ನನ್ನುಸಿರು ಪ್ರಾಣ ಬದುಕು ಎಲ್ಲಾ ನೀನಮ್ಮ
ನನ್ನಾಸೆ ಕನಸ ಉಳಿಸೋ ಜೀವ ನೀನಮ್ಮ
ನಿದಿರೆಯ ದೇವಿ ಹಾಡ್ಯಾಳೆ ಲಾಲಿ
ಹಾಯಾಗಿ ಮಲಗೆ ಜೋಗುಳ ಕೇಳಿ
ಯಾವ ಜನುಮಾದ ಬಂಧ ನಮ್ಮ ಜೋಡಿ
ನಾನು ನಿನ್ನ ನೀ ನನ್ನ ಜೀವ ನಾಡಿ
ಹೋ, ಮೇಲೆ ಮುಕ್ಕೋಟಿ ದೈವವೊಮ್ಮೆ ನೋಡಿ
ತುಂಬು ಹಾರೈಸುವರು ಶುಭ ಹಾಡಿ
ಕಣ್ಣ ಮುಂದೆ ಸೌಭಾಗ್ಯ ಅಂದ್ರೆ ನೀನೆ
ಪ್ರೀತಿ ಧಾರೆ ದೇವತೆ ನಂಗೆ ನೀನೆ
ಕೊನೆವರೆಗೂ ಉಳಿಯೊ ಆಸ್ತಿ ಪ್ರೀತಿ ಒಂದೇನೆ
ಅದನೆಂದು ಕಾಯಬೇಕು ನಿತ್ಯ ಹಿಂಗೆನೆ
ಲಾಲಿ ಸುವ್ವಾಲಿ
ಹಾಡೆಲ್ಲಾ ಲಾಲಿ
ನನ್ನ ಚೆಲುವಿಗೆ ಸೊಗಸಾದ ಲಾಲಿ
ಮನಕೆ ಮುಗಿಲಿನ ರಾಜಕುಮಾರಿ
ಕನಸಾಗೆ ಬರುವೆ ನಾ
ಕೇಳೇ ಚಿಂಗಾರಿ
ಲಾಲಿ ಸುವ್ವಾಲಿ
ಹಾಡೆಲ್ಲಾ ಲಾಲಿ
ನನ್ನ ಚೆಲುವಿಗೆ ಸೊಗಸಾದ ಲಾಲಿ