Elige una pista para reproducir
ಹೇಳೇ ಮೇಘವೇ
ಓಡುವೇ
ಹೀಗೆ ಏತಕೆ?
ನನ್ನ ನೋಡದೆ
ಹೋಗುವೆ
ಹೀಗೆ ಏತಕೆ?
ಹೀಗೇಕೆ ಕಾದೆ
ನೀ ಮುಂಗಾರಿಗಾಗೆ
ನಾ ನಿನ್ನ ಹಿಂದೆ ಸಾಗೋ ಅಲೆಮಾರಿಯಂತಾದರೂ
ನನ್ನನ್ನು ನೀನೇಕೆ ಹೀಗೆ ಮರೀಚಿಕೆ ಹಾಗೆ
ಕಣ್ಣಲ್ಲಿದ್ದರೂ ಸಿಗದೆಯೇ ಕಾಡುವೆ
ಕಾಮನಬಿಲ್ಲಿನಲ್ಲೂ ಕಾಣದಂಥ ಬಣ್ಣ ನೀನೆ
ಮತ್ತೆ ಸೇರದೆ
ಕಾಡುವೆ
ಹೀಗೆ ಏತಕೆ?
ಹೇಳೇ ಮೇಘವೇ
ಹತ್ತಿರ ನನ್ನ ಜೊತೆಯಲೇ
ಇರಬೇಕು ನೀನು ಎಂದು ನಾನು ಕೇಳಿಕೊಂಡೆ
ಸೂರ್ಯನಾ
(ಸೂರ್ಯನಾ)
ಕಿರಣ ತಾಕಿ ನೀ
(ತಾಕಿ ನೀ)
ಮೇಲೆಲ್ಲೋ ಬಾನಿನಲ್ಲಿ ಹೋಗಿ ಸೇರಿಕೊಂಡೆ (ಸೇರಿಕೊಂಡೆ)
ನೀ ದೂರವೇ ಇದ್ದರೂ ನಿನ್ನನು
ನಾ ನೋಡುವೆ ಮುಚ್ಚದೆ ಕಣ್ಣನು
ನೀನೆಂದರೂ
ನಾ ನಿನ್ನ ಬಿಟ್ಟು ಇನ್ನು ಎಲ್ಲಿ ಹೋಗುವೆ
ಇಡೀ ವರ್ಷವೂ
ನಾನಿಲ್ಲೇ ನಿಂತು ನಿನ್ನ ದಾರಿ ಕಾಯುವೆ
ನಾ ಬಾ ಹತ್ತಿರಾ ಎಂದಾಗ ದೂಡುವೆ
ನಾನೊಂದು ಕ್ಷಣಕೂ ನಿನ್ನ ಬಿಟ್ಟು ದೂರ ಹೋದರೆ
ನೋಡುವೆ
ಹೀಗೆ ಏತಕೆ?
ಹೇಳೇ ಮೇಘವೇ
ಹಗಲಿನಲ್ಲಿ ಬಗಲಿನಲ್ಲಿ ಇದ್ದ ನಿನ್ನ ನೇಸರ
ಇರುಳಿನಲ್ಲಿ ದೂರವಾದಾಗ ಮೂಡಿ ಬೇಸರ
ನಿನ್ನ ಕಣ್ಣಿನಿಂದ ಹರಿದ ಕಂಬನಿ
ನನ್ನ ಬಂದು ಸೇರಿ ತಾಗಿ ಸವಿಯ ಇಬ್ಬನಿ
ಮೀರಲ್ಲ ಕೈಗೆ ಎಟುಕದಿರುವ ಮಾಯಗಾತಿ ಗಗನ ಕುಸುಮ
ಕಣ್ಣ ಹನಿಯು ಒಂದೇ ಸಾಕು ದಿನವ ಕಳೆಯಲು
ಇಬ್ಬನಿ ತಬ್ಬಿದಾಗ
ಸುರಿದು ಬಂತು
ಪ್ರೀತಿ ಸೋನೆ
ಕೇಳೇ ಮೇಘವೇ