Elige una pista para reproducir
Sencillo / Pista
ಕರ್ಮದ ಕಲ್ಲನು ಎಡವಿದ ಮನುಜನ
ಬೆರಳಿನ ಗಾಯವು ಮಾಯದು
ಧರ್ಮವ ದರ್ಪಕೆ ಬಲಿ ಕೊಡೋ ದುರುಳರ
ಅಳುವಿಗೆ ದೈವವು ಸೋಲದು
ಅಪ್ಪಳಿಸಿ ಧರೆಯನ್ನೇ ನುಂಗೋ ಘೋರ ಸಿಡಿಲು
ಬಿಕ್ಕಳಿಸುತ್ತ ಭೂಮಿ ತಾಯ ಮಡಿಲು ಕೇಳಿತೇನು?
ಓ ಗರ್ಭದಲ್ಲೇ ಆದ ಗಾಯ ಹಣೆಬರಹ
ಬದುಕಿಡಿ ಮದ್ದು ಹುಡುಕಿ ಅಲೆದಾಡುವೇ
ಯಾರ ಜೊತೆ ಅರಿಯದೆ ನಿನ್ನ ಕಲಹ
ನಿನ್ನನ್ನೇ ನೀನು ಹುಡುಕಿ ಕಳೆದೋಗುವೇ
ನುಂಗಿಕೊಂಡರುನೂ ಮಾಡೋ ಪಾಪನೆಲ್ಲಾ ಗಂಗೆ
ಬಿಟ್ಟು ಹೋಗುತ್ತಾಳೆ ಪಶ್ಚತಾಪ ನಂಗೆ ನಿಂಗೆ
ದರ್ಪದಲಿ ಮೆರೆವಾಗ ತೊಟ್ಟ ಹೂವ ಮಾಲೆ
ನಾಳೆಗೆ ಹೂವು ಉದುರಿ ಕುಣಿಕೆಯಾಯಿತೇನೋ?
ಓ ಸಾವಿಗಿಂತ ಘೋರ ಶಾಪ ಈ ಬದುಕು
ವ್ಯಥೆಯೆಲ್ಲ ಕಳೆವ ಮದ್ದು ಚಿತೆಯಲ್ಲಿದೆ
ಆದಿಯಲ್ಲಿ ಅಂತ್ಯವುಂಟು ಎಲ್ಲದಕ್ಕೂ
ನಡೆವೆ ನೀನದರ ಸುಳಿವು ಸಿಗಲಾರದೆ
ನೆತ್ತರಾಗಿ ಹೋಯ್ತೆ ಹೆತ್ತ ತಾಯ ಎದೆ ಹಾಲು
ಆದ ಪಾಪದಲ್ಲಿ ಹೇಳು ಯಾರದೆಷ್ಟು ಪಾಲು
ವಿಧಿಯನ್ನು ಜಯಿಸೋಕೆ ದಾಟಿ ಹೋದ ಹೊಸಿಲು
ಆ ವಿಧಿಯಾಡೋ ಆಟಕ್ಕೆ ದಾಳವಾಯಿತೇನೋ?