ಮಲಗೆ ಮಲಗೆ ಗುಬ್ಬಿಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆದೇವರಾಣೆ
ನೆರಳಾಗುತೀನಿ
ಹೆಸರಿಲ್ಲದಿರೋ ಬಂಧವೇ
ಜನುಮಾಂತರದಾ ಬಂಧುವೇ
ಮಲಗೆ ಮಲಗೆ ಗುಬ್ಬಿಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆದೇವರಾಣೆ
ನೆರಳಾಗುತೀನಿ
ಆ ಬ್ರಹ್ಮ ತೋಚಿದ್ದು ಗಿಚುತ್ತಾನಮ್ಮ
ಆ ಮರ್ಮ ಕಂಡೋರು ಇಲ್ಲಿ ಯಾರಮ್ಮ
ಇಲ್ಲಿ ಹುಟ್ಟಿದಂಥ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಇಲ್ಲಿ ಹುಟ್ಟಿದಂಥ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಚಿತ್ರ ವಿಚಿತ್ರ ಕಣೆ ಲೊಕವೆಲ್ಲ
ಮಲಗೆ ಮಲಗೆ ಗುಬ್ಬಿಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆದೇವರಾಣೆ
ನೆರಳಾಗುತೀನಿ
ಬಾಳಲ್ಲಿ ನೋವೆಂಬುದೆಲ್ಲ ಮಾಮುಲಿ
ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ
ಸಿಹಿ ಕನಸುಗಳು ಬರಲಿಯೆಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯ ತುತ್ತು ಮರೆಯ ಬೇಡವೆ
ಸಿಹಿ ಕನಸುಗಳು ಬರಲಿಯೆಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯ ತುತ್ತು ಮರೆಯ ಬೇಡವೆ
ಲಾಭಾನ ಕೇಳೋದಿಲ್ಲ ಲಾಲಿಯು
ಮಲಗೆ ಮಲಗೆ ಗುಬ್ಬಿಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆದೇವರಾಣೆ
ನೆರಳಾಗುತೀನಿ
ಹೆಸರಿಲ್ಲದಿರೋ ಬಂಧವೇ
ಜನುಮಾಂತರದಾ ಬಂಧುವೇ