Elige una pista para reproducir
ಈ ಮನಸು ಖಾಲಿ ಡಬ್ಬ ಇದ್ದಂಗೆ
ಭಾವನೆಗಳು, ನೋವುಗಳು spring ತರ
ಜಾಸ್ತಿ ಅಮುಕ್ದಷ್ಟು ನಿಮಗೇ ಅಪಾಯ
ನೀವು ಮುಚ್ಚಳ open ಮಾಡಿದ್ರಿ, ಒಳ್ಳೆದಾಯ್ತು ಬಿಡಿ
ಏನೆಲ್ಲ ಆಗುವುದು ನಿನ ನೆನಪು ಬಂದಾಗ, ಓ, ಹುಡುಗಿ, ನಿನಗೇನು ಗೊತ್ತು
ಏನಿದ್ದರೂ ಕೂಡ ಏನಿಲ್ಲ ಅನಿಸುವುದು ಹೀಗಾಗಲೇಬಾರದಿತ್ತು
ನನ ಪೆದ್ದು ಪ್ರೇಮಕೆ ಸ್ವಲ್ಪ ಸಿಟ್ಟಿಟ್ಟುಕೊ
ನಿನ್ನೊಳಗೆ ನನ್ನನ್ನು ಸೆಳೆದು ಬಚ್ಚಿಟ್ಟುಕೊ
ಮುಂದೇನೇ ಆದರೂ ಅದು ಪ್ರೀತಿಯ ತಪ್ಪು, ನಮದಂತು ಖಂಡಿತ ಅಲ್ಲ
ಹಿಂಗೇನೇ ಇದ್ದರೆ ವಿರಹಕ್ಕೆ ಪರಿಹಾರ ಎಂದೆಂದೂ ಸಿಕ್ಕುವುದೇ ಇಲ್ಲ
ಏನೆಲ್ಲ ಆಗುವುದು ನಿನ ನೆನಪು ಬಂದಾಗ, ಓ, ಹುಡುಗಿ, ನಿನಗೇನು ಗೊತ್ತು
ಏನಿದ್ದರೂ ಕೂಡ ಏನಿಲ್ಲ ಅನಿಸುವುದು ಹೀಗಾಗಲೇಬಾರದಿತ್ತು
ನೀ ಕೊರೆದ ಮೇಣದ ಬೊಂಬೆಯಲ್ಲವೇ ನಾನು, ನಿನ್ನ ಮೈಕಾಂತಿಗೆ ಕರಗಿ ಹೋಗಿರುವೆ
ನೀನು ನಂಬುವುದೊಳಿತು, ನಿನ್ನ ರೂಪದ ಹೊರತು ಬೇಡ ನನಗಿನ್ನೆನೂ, ಕುರುಡನಾಗಿರುವೆ
ಎಲ್ಲ ಕಾಣುವ ಕಣ್ಣು, ತನ್ನ ತಾ ಕಾಣದು, ಪ್ರೇಮಕ್ಕೆ ಕಣ್ಣೆರಡು ಇಲ್ಲ
ಕಣ್ಣ್ಮುಚ್ಚಿದಾಗಲೇ ತುಂಬಾ ನೋಡುವೆ ನಾನು, ನಿನಗಿಂತ ಚಂದ ಯಾರಿಲ್ಲ
ಏನೆಲ್ಲ ಆಗುವುದು ನಿನ ನೆನಪು ಬಂದಾಗ, ಓ, ಹುಡುಗಿ, ನಿನಗೇನು ಗೊತ್ತು
ಏನಿದ್ದರೂ ಕೂಡ ಏನಿಲ್ಲ ಅನಿಸುವುದು ಹೀಗಾಗಲೇಬಾರದಿತ್ತು
ಹೃದಯದಲ್ಲೇ ಬೆಳೆದ ಭಾವಬಳ್ಳಿಯ ಹೂವು ಏನೆಲ್ಲ ಹೇಳುತಿದೆ ಕೇಳು
ಪ್ರೇಮಪದಗಳಿಗೆಲ್ಲ ಅರ್ಥ ಸಾಲುವುದಿಲ್ಲ, ಮಾತುಕತೆಯೇ ದೊಡ್ಡ ಗೋಳು
ಮೌನಕ್ಕೂ ಮೂಕತನ ಕಲಿಸುವುದೇ ಪ್ರೇಮವು, ನನಗೇನು ಕೇಳಿಸುವುದಿಲ್ಲ
ಕಿವಿ ಮುಚ್ಚಿದಾಗಲೇ ತುಂಬ ಕೇಳುವೆ ನಾನು, ನಿನಗಿಂತ ಸಂಗೀತವಿಲ್ಲ
ಏನೆಲ್ಲ ಆಗುವುದು ನಿನ ನೆನಪು ಬಂದಾಗ, ಓ, ಹುಡುಗಿ, ನಿನಗೇನು ಗೊತ್ತು
ಏನಿದ್ದರೂ ಕೂಡ ಏನಿಲ್ಲ ಅನಿಸುವುದು ಹೀಗಾಗಲೇಬಾರದಿತ್ತು