Elige una pista para reproducir
Sencillo / Pista
ಮುದ್ದಾದ ಬಲೆ ಹೆಣೆದ
ಹುಡುಗೀನ ಒಳ ಕರೆದ
ಮುದ್ದಾದ ಬಲೆ ಹೆಣೆದ
ಹುಡುಗೀನ ಒಳ ಕರೆದ
ಮಧುವಂತಿಗೆ ಮುದ ಮಾತಿನ
ಮಕರಂದ ಮಳೆ ಸುರಿದ
ಮುದ್ದಾದ ಬಲೆ ಹೆಣೆದ
ಹುಡುಗೀನ ಒಳ ಕರೆದ
ಸವಿಯಾದ ಸಾವಿರ ಸುಳ್ಳು
ಕವಿಯಾಗಿ ಹೇಳಿದ ಮೆಲ್ಲ
ಕಥೆ ಕೇಳಿ ನೈದಿಲೆ ನಯನೆ
ಜೊತೆಯಾಗೋ ಹಾಗಿದೆ ಎಲ್ಲ
ಸಂದೇಹಾನೆ ಸುಳಿಯದಂತೆ
ಹೊಸ ಸೂತ್ರ ಹುಸೀ ಪಾತ್ರ
ಕೆಂಭೂತವೀಗ ನವಿಲಾಯ್ತು
ಮುದ್ದಾದ ಬಲೆ ಹೆಣೆದ
ಹುಡುಗೀಗೆ ಕೊಡೆ ಹಿಡಿದ
ಮುದ್ದಾದ ಬಲೆ ಹೆಣೆದ
ಹುಡುಗೀಗೆ ಕೊಡೆ ಹಿಡಿದ
ಕರ ಜೋಡಿಸಿ ವರ ಬೇಡಿದ
ಹೃದಯಾನ ಸೆರೆ ಹಿಡಿದ
ಮುದ್ದಾದ ಬಲೆ ಹೆಣೆದ
ಹುಡುಗೀನ ಒಳ ಕರೆದ
ವದನಾರವಿಂದದ ಮೇಲೆ
ಉದಯಾಸ್ತಮಾನದ ಲೀಲೆ
ಹೃದಯಾಂತರಾಳದ ಮೂಲೆ
ಅನುರಾಗ ಯಾಗದ ಶಾಲೆ
ಇದೇನಾಯ್ತು ಪವಾಡಾನ?
ರತೀ ಮಂತ್ರ ಪ್ರಯೋಗಾನ?
ಸುಗುಣವತಿ ಸ್ವಾಧೀನ
ಮುದ್ದಾದ ಬಲೆ ಹೆಣೆದ
ಹುಡುಗೀನ ಒಳ ಕರೆದ
ಮುದ್ದಾದ ಬಲೆ ಹೆಣೆದ
ಹುಡುಗೀನ ಒಳ ಕರೆದ
ಮಧುವಂತಿಗೆ ಮುಧ ಮಾತಿನ
ಮಕರಂದ ಮಳೆ ಸುರಿದ
ಮುದ್ದಾದ ಬಲೆ ಹೆಣೆದ
ಹುಡುಗೀಗೆ ಕೊಡೆ ಹಿಡಿದ