Elige una pista para reproducir
Sencillo / Pista
ಬೆಳಗೆ ಬೆಳಗೆ ಬೆಳಗೆ
ಮಲಗಿರೋ ಮನಸೊಳಗೆ
ಕಚ್ಚಗುಳಿ ಇಡು ಬದುಕೆ
ಕಿಲಕಿಲ ನಗುವಾಸೆ
ಒಳಗೆ ತಲೆಯ ಒಳಗೆ
ಹುಳ ಬಿಡೋ ಜನರೊಳಗೆ
ಕಿರಿಕಿರಿ ಹಲ್ಲು ಕಿರಿದು
ಕಿಲಕಿಲ ನಗುವಾಸೆ
ಈ ಭೂಮಿ ಮೇಲೆ ನಗೂನೆ ದೀಪ
ನಗೊನೇ ದೇವರಾ ಇನ್ನೊಂದು ರೂಪ
ಕಿಸೇಲಿ ಕಾಸು ಇರೋನಿಗಿಂತ
ಖುಷಿಲಿ ಬಾಳೋ ನೀನೇ ಶ್ರೀಮಂತ
ಏನಾದರೂ ಆಗಲಿ ಜೀವನ
ಊಟ ಮಾಡಾಣ ಒಳ್ಳೆ ನಿದ್ದೆ ಮಾಡಣ
ನಾಳೆದು ನಾಳೆ ನೋಡೋಣ
ಬಂದಿರೋ ಹಾಗೆ ಬಾಳೋಣ
ಹೋರಾಟ ಹಾರಾಟ ಎಲ್ಲಾನು ಮಣ್ಣು
ಸತ್ತ ಮೇಲು ಫೋಟೋಲಿ ನಗಬೇಕು ಇನ್ನೂ
ಬೆಳಗೆ ಬೆಳಗೆ ಬೆಳಗೆ
ಮಲಗಿರೋ ಮನಸೊಳಗೆ
ಕಚ್ಚಗುಳಿ ಇಡು ಬದುಕೆ
ಕಿಲಕಿಲ ನಗುವಾಸೆ
ಒಳಗೆ ತಲೆಯ ಒಳಗೆ
ಹುಳ ಬಿಡೋ ಜನರೊಳಗೆ
ಕಿರಿಕಿರಿ ಹಲ್ಲು ಕಿರಿದು
ಕಿಲಕಿಲ ನಗುವಾಸೆ
ಈ ಭೂಮಿ ಮೇಲೆ ನಗೂನೆ ದೀಪ
ನಗೊನೇ ದೇವರಾ ಇನ್ನೊಂದು ರೂಪ