Выберите трек для воспроизведения
ಒಂದು ಸಣ್ಣ ಆಸೆ ಬದುಕ ನುಂಗಿತೇ?
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ?
ಒಂದು ಸಣ್ಣ ಆಸೆ ಬದುಕ ನುಂಗಿತೇ?
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ?
ಕಂಡ ಕನಸು ಕಣ್ಣಿನಲ್ಲೇ ಕರಗಿತೇ?
ಕಂಡ ಕನಸು ಕಣ್ಣಿನಲ್ಲೇ ಕರಗಿತೇ?
ಯಾವ ಶಾಪ ಬೆನ್ನ ಬಿಡದೇ ಕಾಡಿದೆ?
ಒದುಗಲಾರದಂಥ ನೋವು ಎದೆಯಲಿ
ತುಂಬಿ ಕಣ್ಣ ನೀರೇ ಸೂಜಿಯಾಗಿದೆ
ಒಂದು ಸಣ್ಣ ಆಸೆ ಬದುಕ ನುಂಗಿತೇ?
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ?
ಮನದಿ ತುಂಬಿರೋ ಅಂಧಕಾರಕೆ ಬೆದರಿ ಈಗ ಮಾತು ಸತ್ತಿದೆ
ಬೇರು ಮುರಿದಿರೋ ಮರದ ಮನಸಿನ ಭಾವದಂತೆ ಜೀವ ನರಳಿದೆ
ಹಾರಲೆಂದು ಹೊರಟ ಜೋಡಿ ಹಕ್ಕಿಗೆ
ದೈವವೇನೇ ಕಲ್ಲು ಬೀಸಿ ಕೂತಿದೆ
ಒಂದು ಸಣ್ಣ ಆಸೆ ಬದುಕ ನುಂಗಿತೇ?
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ?
ಮರೆವೆನೆಂದರೂ ಮರೆಯಲಾಗದೆ ಮನಸೇ ಈಗ ವ್ಯಾಘ್ರವಾಗಿದೆ
ಸುಳಿಯ ಸುತ್ತಲೂ ತಾನೇ ತಿರುಗುತ ಸಿಲುಕಲೆಂದು ಪ್ರಾಣ ಕಾದಿದೆ
ಮನದ ಹಸಿಯ ಗೋಡೆ ಮೇಲೆ ಗೀಚಿದ
ಗಾಯವೀಗ ಮಾಯದಂತೆ ಕಾಡಿದೆ
ಒಂದು ಸಣ್ಣ ಆಸೆ ಬದುಕ ನುಂಗಿತೇ?
ಪ್ರೀತಿ ಬಯಸಿ ಹೃದಯ ತಪ್ಪು ಮಾಡಿತೇ?
ಕಂಡ ಕನಸು ಕಣ್ಣಿನಲ್ಲೇ ಕರಗಿತೇ?
ಕಂಡ ಕನಸು ಕಣ್ಣಿನಲ್ಲೇ ಕರಗಿತೇ?
ಯಾವ ಶಾಪ ಬೆನ್ನ ಬಿಡದೇ ಕಾಡಿದೆ?
ಒದುಗಲಾರದಂಥ ನೋವು ಎದೆಯಲಿ
ತುಂಬಿ ಕಣ್ಣ ನೀರೇ ಸೂಜಿಯಾಗಿದೆ