Выберите трек для воспроизведения
Сингл / Трек
ಕನಸಿನ ಕಿಟಕಿಯ ತೆರೆಯುವೆ ಏತಕೆ
ಉಸಿರನು ಊದುವ ಹೃದಯದ ಗಾಯಕೆ
ಪರಿಚಯ ನೀಡದೆ ಪರಿವೆಯಾ ಮಾಡದೇ
ಮರೆಯದೆ ಸಲ್ಲಿಸು ನೆನಪಿನ ಕಾಣಿಕೆ
ಕನಸಿನ ಕಿಟಕಿಯ ತೆರೆಯುವೆ ಏತಕೆ
ನಾಟಿಹೋದಂಥ ನಿನ್ನಯ ನೋಟವೇ ಉಜ್ವಲ
ನಿನ್ನ ಮಾಯಾವಿ ಸ್ಪರ್ಶಕೆ ರಮ್ಯಾ ಕೋಲಾಹಲ
ಯಾವುದೋ ಊರಲ್ಲಿ ಹಾಡಿನ ಸಾಲಂತೆ
ಸಾಗುವ ಬಾರೆ ಕೈ ಹಿಡಿದು
ಮೆಲ್ಲಗೆ ಆಗಾಗ ರೆಪ್ಪೆಯ ಮೇಲೊಂದು
ಮುತ್ತನು ನೀ ನಿಡುವೆಯಾ ಗೋಗರೆದು
ಕನಸಿನ ಕಿಟಕಿಯ ತೆರೆಯುವೆ ಏತಕೆ
ಬೇಕು ಈ ಬಾಳ ಗೀತೆಗೆ ನಿನ್ನದೇ ಬೆನ್ನುಡಿ
ಮಾಡಿಕೋ ಬೇಗ ನನ್ನನು ನಿನ್ನ ಕೈ ಗನ್ನಡಿ
ಸುಂದರವಾದಂಥ ಸಾವಿರ ಮಾತಲ್ಲೂ ವರ್ಣಿಸಲಾರೆ ಈ ತುಡಿತ
ಬೇಸರವೇನಿಲ್ಲ ಹೋದರೂ ಈ ಪ್ರಾಣ
ತೋಳಿನಲಿ ನೀನಿರಲು ಪ್ರೇಮಿಸುತ
ಕನಸಿನ
(ಕನಸಿನ)
ಕಿಟಕಿಯ
(ಕಿಟಕಿಯ)
ತೆರೆಯುವೆ
(ತೆರೆಯುವೆ)
ಏತಕೆ
(ಏತಕೆ)
ಉಸಿರನು
(ಉಸಿರನು)
ಊದುವ
(ಊದುವ)
ಹೃದಯದ
(ಹೃದಯದ)
ಗಾಯಕೆ
(ಗಾಯಕೆ)