Выберите трек для воспроизведения
ಪ್ರೀತಿಯಲ್ ಒಂದನೇ ತರಗತಿ ಈಗ ನಾನಾದೆ
ಮಾತಿಲ್ಲದೆ ಮೂಗನ ಮಾಡಿದೆಯಲ್ಲೇ
ಎಲ್ಲೇ ಹೋದರು ನಿನ್ನ ಲೀಲೆ ನನ್ನ ಮೇಲೆ
ಕಾಣೆ ಆದೆನು ನಾ ನಿಂತಲ್ಲೇ
ಒಲವೆಂದರೆ ಸ್ವಲ್ಪನೂ ಆಸಕ್ತಿ ಇರಲಿಲ್ಲ
ಈ ಕಣ್ಣಿಗೆ ನೀ ಬೀಳೋ ಮುನ್ನ
ನೀ ಬಂದ ಕ್ಷಣದಿಂದ ಮರು ಜನ್ಮ ಬಂತೇನೋ
ನಾನೀಗ ಸಂಪೂರ್ಣ ಭಿನ್ನಾ
ಪ್ರೀತಿಯಲ್ ಒಂದನೇ ತರಗತಿ ಈಗ ನಾನಾದೆ
ಮಾತಿಲ್ಲದೆ ಮೂಗನ ಮಾಡಿದೆಯಲ್ಲೇ
ಎಲ್ಲೇ ಹೋದರು ನಿನ್ನ ಲೀಲೆ ನನ್ನ ಮೇಲೆ
ಕಾಣೆ ಆದೆನು ನಾ ನಿಂತಲ್ಲೇ
ಸೆಳೆದೆಯಲ್ಲೇ ಮೆಲ್ಲನೆ ಎಳೆದೆಯಲ್ಲೇ
ನನ್ನನ್ನು ಒಲವಿನ ಕಡೆಗೆ
ಈಗ ಕಣ್ಣಿನಲ್ಲಿ ಕೋಟಿ ಕನಸಿದೆ
ಎಲ್ಲ ನೀನು ಕೊಟ್ಟ ಕೊಡುಗೆ
ನನ್ನಲ್ಲಿ ಅಡಗಿ ಕೂತ ಮುದ್ದಾದ ರಸಿಕನನ್ನು
ನೀ ಬಂದು ನನಗೆ ಇಂದು ತೋರಿ ಹೋದೆ
ನೂರಕ್ಕೆ ನೂರು ನೀನು ಹೆಚ್ಚೇನು ಹೇಳಲಿ ನಾನು
ನಿಂತಲ್ಲೇ ಕರಗಿ ನೀರಾದೆ
ಪ್ರೀತಿಯಲ್ ಒಂದನೇ ತರಗತಿ ಈಗ ನಾನಾದೆ
ಮಾತಿಲ್ಲದೆ ಮೂಗನ ಮಾಡಿದೆಯಲ್ಲೇ
ಎಲ್ಲೇ ಹೋದರು ನಿನ್ನ ಲೀಲೆ ನನ್ನ ಮೇಲೆ
ಕಾಣೆ ಆದೆನು ನಾ ನಿಂತಲ್ಲೇ
ಬಾಳಿನಲ್ಲಿ ಬಂದಂಥ ದಾರಿಯಲ್ಲಿ
ಒಬ್ಬಂಟಿಯಾಗಿ ನನ್ನ ಬಿಡದೆ
ನಾನಾಡೋ ತರಲೆಯನ್ನು ತುಂಟತನವನ್ನು
ಮುದ್ದಾದ ಆಟವೆಂದು ಸವಿದೆ
ಎಂದೆಂದೂ ಮಾಸದಂತ ಉತ್ಸಾಹ ತಂದೆ ನೀನು
ಎದೆಯಲ್ಲಿ ಉಸಿರಿನಂತೆ ಸೇರಿ ಹೋದೆ
ವರವಾದೆ ನನಗೆ ನೀನು ಬೇಕಿಲ್ಲ ಬೇರೆ ಏನು
ನೀನಿದ್ದರೆ ಗೆಲ್ಲುವೆ ಜಗವನ್ನು
ಪ್ರೀತಿಯಲ್ ಒಂದನೇ ತರಗತಿ ಈಗ ನಾನಾದೆ
ಮಾತಿಲ್ಲದೆ ಮೂಗನ ಮಾಡಿದೆಯಲ್ಲೇ
ಎಲ್ಲೇ ಹೋದರು ನಿನ್ನ ಲೀಲೆ ನನ್ನ ಮೇಲೆ
ಕಾಣೆ ಆದೆನು ನಾ ನಿಂತಲ್ಲೇ
ಒಲವೆಂದರೆ ಸ್ವಲ್ಪನೂ ಆಸಕ್ತಿ ಇರಲಿಲ್ಲ
ಈ ಕಣ್ಣಿಗೆ ನೀ ಬೀಳೋ ಮುನ್ನ
ನೀ ಬಂದ ಕ್ಷಣದಿಂದ ಮರು ಜನ್ಮ ಬಂತೇನೋ
ನಾನೀಗ ಸಂಪೂರ್ಣ ಭಿನ್ನಾ