Выберите трек для воспроизведения
ಹೇಳೋಕಾಗ್ದೇ ಇರೋದ್ ತುಂಬಾ ಇದೆ, ದಯವಿಟ್ಟು ಕೆದಕಬೇಡಿ
Shirt'ನ್ ಮೊದಲನೆ ಗುಂಡಿ ತಪ್ಪ್ ಹಾಕ್ಕೊಂಡ್ರೆ, ಎಲ್ಲ ಗುಂಡಿ ತಪ್ಪಾಗುತ್ತೆ
ಆ mistake ನೀವ್ life-ಲ್ ಮಾಡ್ಕೋಬೇಡಿ, ಊರಿಗ್ ಹೋಗ್ಬಿಡಿ
ನಿಮಗ್ ನನಗಿಂತ ಒಳ್ಳೆ ಹುಡುಗಿ ಸಿಗ್ತಾಳೆ ಅನ್ನೋ dialogue ಬಿಟ್ಟ್ ಇನ್ನೆಲ್ಲ ಹೇಳ್ಬಿಟ್ರಿ
ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ
ಅಂಗಳದಿ ನಿಂತಿರುವ ಸಂಚಾರಿ
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ
ಸ್ವಪ್ನವನು ತಂದಿರುವ ವ್ಯಾಪಾರಿ
ಬೆಳೆದೀತೆ ಆಸೆಗಳ ಈ ಯಾದಿ?
ಕಳೆದೀತೆ ನಡುವೆಲ್ಲೋ ಈ ಹಾದಿ?
ಬೇಕೇನು ಈ ಪ್ರೀತಿ ಇತ್ಯಾದಿ?
ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ
ಅಂಗಳದಿ ನಿಂತಿರುವ ಸಂಚಾರಿ
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ
ಸ್ವಪ್ನಗಳ ತಂದಿರುವ ವ್ಯಾಪಾರಿ
ಹಿಡಿಯಷ್ಟು ಹೃದಯದಲಿ ಹಿಡಿಸಲಾಗದೇ ಹೋದ
ಮೌನವನು ಶ್ರುತಿ ಮಾಡೋ ವ್ಯಾಯಾಮವೇಕೆ?
ಅಚ್ಚುಮೆಚ್ಚಾಗಿರುವ ಈ ಭಾವ ಸರಿತೆಯಲಿ
ಅಚ್ಚಿನ ದೋಷಗಳು ಮೈದೋರಬೇಕೆ?
ಹರಿವಾಗ ಈ ಬಾಳು ನದಿಯಾಗಿ
ಇರಬೇಕೆ ನೀ ಸಣ್ಣ ಸುಳಿಯಾಗಿ?
ಬೇಕೇನು ಈ ಪ್ರೀತಿ ಇತ್ಯಾದಿ?
ಹಂಬಲದ ಹೂವನ್ನು
ಚಂದಿರನ ಮೊಗದಲ್ಲೇ ಕಂಬನಿಯ ಕಲೆಗಳಿವೆ
ಉಂಟಲ್ಲ ಅದರಲ್ಲಿ ನಮಗೊಂದು ಪಾಠ
ಈ ಪುಟ್ಟ ಕಂಗಳಲಿ ಲೋಕವೇ ಬಿಂಬಿಸಲಿ
ಮೋಹದಲಿ ಸಂಕುಚಿತವಾದೀತೆ ನೋಟ?
ಬಾಡೀತೆ ಈ ಜೀವ ಬಿಡಿಯಾಗಿ?
ಬದುಕನ್ನೇ ನೋಡೋಣ ಇಡಿಯಾಗಿ
ಬೇಕೇನು ಈ ಪ್ರೀತಿ ಇತ್ಯಾದಿ?
ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ
ಅಂಗಳದಿ ನಿಂತಿರುವ ಸಂಚಾರಿ
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ
ಸ್ವಪ್ನಗಳ ತಂದಿರುವ ವ್ಯಾಪಾರಿ
ಬೆಳೆದೀತೆ ಆಸೆಗಳ ಈ ಯಾದಿ?
ಕಳೆದೀತೆ ನಡುವೆಲ್ಲೋ ಈ ಹಾದಿ?
ಬೇಕೇನು ಈ ಪ್ರೀತಿ ಇತ್ಯಾದಿ?