Выберите трек для воспроизведения
ಸಮಯಾನೇ ಸರಿದೂಗೋ ಗಡಿಯಾರ
ಸರಿಯಾಗಿ ನಡೆಸು ನೀ ಮನಸಾರ
ಓ, ಮರೆಯಾಗೋ ಮೋಡ ಮಳೆಯಾಗುವಂತೆ
ಕರೆಯೋಲೆ ಒಂದು ಬಂದಂತೆ
ಜನುಮ ವರದಾನ ಸಾಕೀ ಬಹುಮಾನ
ಮೌನದ ಮಮತೆಗೆ ಇದೆ ಮುಳ್ಳಿನ ಸೇತುವೆ
ಅವಳ ತರುವಾಯ ಎಲ್ಲಾ ನಿರುಪಾಯ
ದಿನಚರಿ ಪುಟದಡಿ ಹೊಸದಾಗಲಿ ಮುನ್ನುಡಿ
ಹುಟ್ಟುವುದು ಇಲ್ಲೇ
ಸಾಯುವುದು ಇಲ್ಲೇ
ಪ್ರೀತಿಯನ್ನು ಪಡೆಯಬೇಕು ಇಲ್ಲೇ
ಪ್ರೀತಿಯನ್ನು ಪಡೆಯಬೇಕು ಇಲ್ಲೇ
ತೊರೆದ ಹಾದಿಯಲೇ ನೆನಪು ಕಾಡುತಿದೆ
ಹೇಳಲು ನೂರಿದೆ
ತುಟಿ ಆಡದೆ ಸೋತಿದೆ
ಬೆರಳ ಹಿಡಿ ನಡೆಯೋ ಬಯಕೆ ಮೂಡುತಿದೆ
ಹರಸುವ ಕೈಗಳ ಬಯಸುತ್ತಿದೆ ಕಂಗಳು
ಸೋಲೆಂಬುದಿಲ್ಲೇ ಗೆಲುವೆಂಬುದಿಲ್ಲೇ
ಕಳೆದು ಪಡೆವ ಪ್ರೀತಿ ಕೂಡ ಇಲ್ಲೇ
ಪಡೆದು ಕಳೆಯೋ ಬದುಕು ಕೂಡ ಇಲ್ಲೇ
ಸಮಯಾನೇ ಸರಿದೂಗೋ ಗಡಿಯಾರ
ಸರಿಯಾಗಿ ನಡೆಸು ನೀ ಸರದಾರ