Выберите трек для воспроизведения
ಅರೆರೆ ಅವಳ ನಗುವ
ನೋಡಿ ಮರತೆ ಜಗವ
ಹಗಲುಗನಸು ಮುಗಿಸಿ
ಸಂಜೆ ಮೇಲೆ ಸಿಗುವ
ಮುಸ್ಸಂಜೆಗೆ ಹಾಡಾಗಲು ತಂಗಾಳಿಯ ತಯಾರಿ
ಸದ್ದಿಲ್ಲದೇ ಆ ಸೂರ್ಯನು ಬಾನಾಚೆಗೆ ಪರಾರಿ
ಅವೆಳೆದುರು ಬಂದಾಗ ಎದೆ ಬಡಿತ ಜೋರಾಗಿ
ಕೂಗೋ ಕೋಗಿಲೆ ಮನದ ಮಾಮರಕೆ ಮರಳಿದೆ
Mike—u ತರುವುದನೆ ಮರೆತಿದೆ
ಹಾಡು ಹಗಲೇನೆ ಬಾನಲಿ ನೂರುದಾರಿಯ ತಪ್ಪಿದೆ
ಈ ಹರೆಯವು ಬಳಿ ಬಂದರೆ Borewellಇಗು ಬಾಯಾರಿಕೆ
ಈ ವಯಸಿಗು ಕನಸೆಲ್ಲವ ನನಸಾಗಿಸೋ ಕೈಗಾರಿಕೆ
ಗಿಡ ಮರವಾಗೋ ವರಾ ದೊರೆತಾಗ
ಬೆಟ್ಟ ಬಳಿ ಕರೆದು ಗುಟ್ಟು ಹೇಳಿದೆ
ಹೊಟ್ಟೆಯೊಳಗಿಂದ ಚಿಟ್ಟೆ ಹಾರಿದೆ
ಬಿಸಿಲೇರೋ Timeಅಲ್ಲಿ
ಬೀಸಿರಲು ತಂಗಾಳಿ
ಸೇರೋ ಮೋಡವು Mood—u ಬಂದ ಕಡೆ ಓಡಿದೆ
ಗಾಳಿ ಮಾತನ್ನೇ ಕೇಳದೆ
ಓಡೋ ಕಾಲದ ಕಾಲಿಗೆ ಕಾಲು ಗೆಜ್ಜೆ ಕಟ್ಟಿದೆ
ದಿನ ಶಾಲೆಗೆ Late ಆದರೂ
ತುಸು ನಾಚುತ ತಲೆ ಬಾಚಿದೆ
ಕೊಳ ಪೆಟ್ಟಿಗೆ ಏಟಾದರೂ ನಸು ನಾಚುತ ಕೈ ಚಾಚಿದೆ
ಎಳೆ ಹೃದಯಕ್ಕೆ ಮಳೆ ಸುರಿದಾಗ
ಮೀಸೆ ಅಂಚಲ್ಲಿ ಆಸೆ ಚಿಗುರಿದೆ
Bunch—u Bunch ಆಗಿ ಕನಸು ಬಂದಿದೆ
ಕಿರು ನಗೆಯ ತೇರನ್ನು ಕಣ್ಣಲ್ಲೇ ಎಳೆವಾಗ
ರಾಶಿ ಕಾಮನೆ ಎದೆಯ ಬಾಗಿಲಿಗೆ ಬಂದಿದೆ
ಏನೂ ಸುಳಿವನ್ನೇ ನೀಡದೆ