Оберіть трек для відтворення
ನಾ ನಗುವ ಮೊದಲೇನೆ ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ
ನಾ ನುಡಿವ ಮೊದಲೇನೆ ತೊದಲುತಿದೆ ಹೃದಯವಿದು ಒಳಗೊಳಗೇ
ನಾ ನಡೆವ ಮೊದಲೇನೆ ಎಳೆಯುತಿದೆ ದಾರಿ ಇದು ನಿನ್ನೆಡೆಗೆ
ನಾ ಅರಿವ ಮೊದಲೇನೆ ಉರಿಯುತಿದೆ ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ ಯಾರು ಯಾರು ನೀ ನನಗೆ

ತಿಳಿಸದೆ ನನಗೆ ಹುಡುಕಿದೆ ನಿನ್ನ ನನ್ನಯ ಕಣ್ಣು
ಸಿಹಿ ಸಂಕಟ ಸಾಕಾಗಿದೆ ಮುಂದೆ ಏನು
ಕಲಿತಿದೆ ಮನವು ಕುಣಿಯುವುದನ್ನು ಕಂಡರೆ ನೀನು
ನಾನು ನನ್ನ ಪಾಡಿಗಿರಲು ಯಾಕೆ ಕಂಡೆ ನೀ ನನಗೆ
ನಾ ನಗುವಮೊದಲೇನೆ ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ
ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೇ ಹೃದಯ
ನನಗೇತಕೆ ನನಮೇಲೆಯೇ ಈ ಸಂಶಯ
ಬರಿ ಕನಸಿನಲಿ ಆಗುವೆ ಏಕೆ ನನ್ನೆಯ ಇನಿಯಾ
ಹೇಳು ಒಮ್ಮೆ ಹೇಳು ಇದುವೇ ಪ್ರೀತಿ ಎಂದು ನೀ ನನಗೆ