Оберіть трек для відтворення
ಓ ಗುಲಾಬಿಯೇ ಓಹೊ ಗುಲಾಬಿಯೇ
ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓಹೊ
ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯಾವೆ ಓಹೊ
ಓ ಗುಲಾಬಿಯೇ ಓಹೊ ಗುಲಾಬಿಯೇ
ದ್ವೆಷವ ಸಾಧಿಸು ಪ್ರೇಮದ ಅಸ್ತ್ರವೇ
ಸೇಡಿನ ಹಾಡಿಗೆ ಹಾಡಿನ ಧಾಟಿಗೆ
ವಿನಯದ ತಾಳವೇ ಭಾವಕೆ ವಿಷದ ಲೇಪವೇ
ಹೆಣ್ಣು ಒಂದು ಮಾಯೆಯ ರೂಪ ಎಂಬ ಮಾತಿಗೆ
ಹೆಣ್ಣು ಚಲಿಸೋ ಭೂಮಿಯ ರೂಪ ಎಂದು ಹೇಳಿದೆ
ಯಾವುದು ಯಾವುದು ನಿನಗೆ ಹೋಲುವುದಾವುದು
ಯಾವುದು ಯಾವುದು ನಿನಗೆ ಹೋಲುವುದಾವುದು
ಓ ಗುಲಾಬಿಯೇ ಓಹೊ ಗುಲಾಬಿಯೇ
ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓಹೊ
ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯಾವೆ ಓಹೊ
ಓ ಗುಲಾಬಿಯೇ ಓಹೊ ಗುಲಾಬಿಯೇ
ಮನ್ನಿಸು ಮನ್ನಿಸು ಎಲ್ಲವ ಮನ್ನಿಸು
ನೊಂದಿರೋ ಮನಸಿಗೆ ಬೆಂದಿರೋ ಕನಸಿಗೆ
ಮಮತೆಯ ಕಿಂಕಿಸು ನಿನ್ನಯ ಪ್ರೀತಿಯ ಒಪ್ಪಿಸು
ಒಂದು ಬಾರಿ ಪ್ರೀತಿಸಿ ಒಲ್ಲೇ ಎಂದು ಹೇಳುವೆ
ಪ್ರೀತಿ ಮರೆತು ಹೋಗಲು ಹೆಣ್ಣೇ ನೀನು ಸೋಲುವೆ
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ
ಏನಿದೆ ಏನಿದೆ ನಿನ್ನಯ ಮನದೊಳಗೇನಿದೆ
ಓ ಗುಲಾಬಿಯೇ ಓಹೊ ಗುಲಾಬಿಯೇ
ನಿನ್ನಂದ ಚೆಲುವಿಂದ ಸೆಳೆಯೋದೆ ಪ್ರೇಮವೇ ಓಹೊ
ಮುಳ್ಳಿಂದ ಬಾಳಂದ ಕೆಡಿಸೋದು ನ್ಯಾಯಾವೆ ಓಹೊ
ಓ ಗುಲಾಬಿಯೇ ಓಹೊ ಗುಲಾಬಿಯೇ