Оберіть трек для відтворення
Сингл / Трек
ಹೂವಿಗೆ ತಂಗಾಳಿ ಬೇಡವೇ?
ತಂಗಾಳಿ ಬೇಡವೇ?
ಹೂವಿಗೆ ತಂಗಾಳಿ ಬೇಡವೇ?
ತಂಗಾಳಿ ಬೇಡವೇ?
ಹೂವಿಗೆ ತಂಗಾಳಿ ಬೇಡವೇ?
ತಂಗಾಳಿ ಬೇಡವೇ?
ಗಾಳಿ ಮೇಲೆ ಮಲ್ಲೆ ಮೊಗ್ಗು ಮುನಿಸಿಕೊಂಡರೆ
ಮುನಿಸಿಕೊಂಡರೆ ಸುಗಂಧವೆಲ್ಲಿದೆ
ಸಾಗರ ನದಿಗೆ ಬೇಡವೇ?
ನದಿಗೆ ಬೇಡವೇ?
ಕಡಲ ಮೇಲೆ ನದಿಯು ತಾನು ಮುನಿಸಿಕೊಂಡರೆ
ಮರಳಿ ಹೋಗಲು ದಾರಿಯಲ್ಲಿದೆ?
ಹೂವಿಗೆ ತಂಗಾಳಿ ಬೇಡವೇ?
ತಂಗಾಳಿ ಬೇಡವೇ?
ವಸಂತ ಕಾಲಕೆ ಸಂಗೀತ ಕೋಗಿಲೆ
ತನ್ನಿಂಚರ ತರದಿದ್ದರೆ ಏನನ್ನಲಿ
ತನ್ನಿಂಚರ ತರದಿದ್ದರೆ ಏನನ್ನಲಿ
ವಿವಾಹ ಬಂಧನ ಸಮ್ಮಿಲನ ಗಾಯನ
ನೀನೊಬ್ಬನೇ ಹಾಡೆಂದರೆ ಏನನ್ನಲಿ
ನೀನೊಬ್ಬನೇ ಹಾಡೆಂದರೆ ಏನನ್ನಲಿ
ವೇದದ ನಡುವೆ ಬೊಂಬೆಯ ಮದುವೆ
ಅದೇಕೆ ಬೇಕೋ ಕಾಣೇ
ಭೂಮಿಗೆ ಚಂದ್ರಮನು ಬೇಡವೇ?
ಚಂದ್ರಮನು ಬೇಡವೇ?
ಚಂದ್ರನೊಡನೆ ಭೂಮಿ ತಾನು ಮಾತು ಬಿಟ್ಟರೆ
ಪ್ರೀತಿ ಪ್ರೇಮಕೆ ಸ್ಪೂರ್ತಿ ಎಲ್ಲಿದೆ?
ಹೂವಿಗೆ ತಂಗಾಳಿ ಬೇಡವೇ?
ತಂಗಾಳಿ ಬೇಡವೇ?
ನಿಸರ್ಗ ನಿಯಮವ ಮೀರೋದು ಸಾಧ್ಯವಾ
ನಡು ರಾತ್ರೀಲಿ ಬಯಸದಿರು ಸೂರ್ಯೋದಯ
ಇನ್ನೆಂದಿಗೂ ನೀ ಕಾಣೆಯಾ ಸೂರ್ಯೋದಯ
ಮನಸ್ಸನ್ನು ಬದಲಿಸು
ಬಾಳನ್ನು ಪ್ರೀತಿಸು
ಭಾವಗಳ ಬಾನಲ್ಲಿ ತಾ ಪ್ರೇಮೋದಯ
ನಿನಗಾಗಿಯೇ ಕಾದಿರುವುದೀ ಚಂದ್ರೋದಯ
ಬಿರಿಯೋ ಮೊದಲು ಹೃದಯದ ಅಳಲು
ನೀನೊಮ್ಮೆ ಕೇಳೇ ಜಾಣೆ
ಹೂವಿಗೆ ತಂಗಾಳಿ ಬೇಡವೇ?
ತಂಗಾಳಿ ಬೇಡವೇ?
ಗಾಳಿ ಮೇಲೆ ಮಲ್ಲೆ ಮೊಗ್ಗು ಮುನಿಸಿಕೊಂಡರೆ
ಮುನಿಸಿಕೊಂಡರೆ ಸುಗಂಧವೆಲ್ಲಿದೆ
ಹೂವಿಗೆ ತಂಗಾಳಿ ಬೇಡವೇ?
ತಂಗಾಳಿ ಬೇಡವೇ?