Оберіть трек для відтворення
ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು, ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ
ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದಾ ವರದಿಗಾರನು
ನಿನ್ನ ಕಂಡ ಕ್ಷಣದಲೇ ಮಾತೆ ಮರೆವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೇ ಚೂರು ಪಾಪಿ ನಾನು
ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕಣ್ಣಾ ಕೊರೆದು ದೋಚಿಕೊಂಡ ನಾ ನೆನಪುಗಳಿಗೆ ಪಾಲುದಾರ
ನನ್ನದೀ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೇ ಚೂರು ಕಳ್ಳ ನಾನು
ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ