Сингл / Трек
ತಾರೆ ನೇಹರೆ ಈ ಕಣ್ಣಲ್ಲಿ
ಅನಾಹೀತ, ಓ ಅನಾಹೀತ
ತಾರೆ ಮನಸಾರೆ ನಾಮರೆಯಾದೆ
ಅನಾಹೀತ, ಓ ಅನಾಹೀತ
ತರ ತರಾ ಕಲರವಾ ಅರಿಯದಾ ಆಲೋಚನೆ
ತಿಳಿಯದೇ ಜರುಗಿದೆ ಏನು ಆಕರ್ಷಣೆ
ತಾನೇ ತೇಲಿ ತೇಲಿ ಎಲ್ಲೊ ಹೋದ ನೀಲಿ
ನಿಂತೇ ನಾನು ಇಲ್ಲಿ ಏಕೋ ಮೌನ ತಾಳಿ
ಇಂಪಾದ ಆಲಾಪನ ಚಲಿಸೋತಾ ರಾಗಾನ
ಹೊಳೆಯೋ ಈ ಸಂಜೆಗೇ ನೀನೆ ಕಾರಣ
ಹುಡುಕಿತ್ತು ನಿನ್ನನ್ನೇ ಬೆಳ ದಿಂಗಳು
ರೆಪ್ಪೆಯನು ತಾಕಿತು ವಾಲಿ
ಕಣ್ಣಲ್ಲೆ ಅವಿತಂತೆ ಇಬ್ಬನಿಯು
ಮಿನುಗಿತ್ತು ಆ ಬೆಳಕಲಿ
ಹೆಜ್ಜೆ ಗುರುತು ಬಿಡಿಸಿದ್ದೆ ನಭದಲ್ಲಿ
ಎಲ್ಲಾ ಮಾತು ಜೋಡಿಸುವೆ ಚುಕ್ಕಿಯಲ್ಲಿ
ತಾರೆ ಮನಸಾರೆ ನೀ ಜೊತೆಯಾದೆ
ಅನಾಹೀತ, ಓ ಅನಾಹೀತ
ತಾರೆ ಮನಸಾರೆ ನೀ ಜೊತೆಯಾದೆ
ಅನಾಹೀತ, ಅನಾಹೀತ