Оберіть трек для відтворення
ಕುಂಬಾರಕಿ ಈಕೀ ಕುಂಬಾರಕಿ
ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಚಿನ್ನ ಎಂಬುವ ಮಣ್ಣನು ತರಿಸಿ
ತನು ಎಂಬುವ ನೀರನ್ನು ಹಣಿಸಿ
ಚಿನ್ನ ಎಂಬುವ ಮಣ್ಣನು ತರಿಸಿ
ತನು ಎಂಬುವ ನೀರನ್ನು ಹಣಸಿ
ಮನ ಎಂಬುವ ಹುದಲನ್ನು ಕಲಸಿ
ಗುಣ ಎಂಬುವ ಸೂಸನ್ನು ಹಾಕಿ
ಕುಂಬಾರಕಿ ಈಕೀ ಕುಂಬಾರಕಿ
ಕುಂಬಾರಕಿ ಈಕೀ ಕುಂಬಾರಕಿ
ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಆಚಾರ ಎಂಬುವ ಆವಿಗೆ ಮುಚ್ಚಿ
ಅರಿವು ಎಂಬುವ ಬೆಂಕಿಯ ಹಚ್ಚಿ
ಆಚಾರ ಎಂಬುವ ಆವಿಗೆ ಮುಚ್ಚಿ
ಅರಿವು ಎಂಬುವ ಬೆಂಕಿಯ ಹಚ್ಚಿ
ಸಾವಿರ ಕೊಡಗಳ ಸುಟ್ಟು ಇಂದು
ಸಂತಿಗೆ ಒಯ್ದು ಮಾರುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಕುಂಬಾರಕಿ ಈಕೀ ಕುಂಬಾರಕಿ
ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಮೂರು ಕಾಸಿಗೊಂದು ಕುಡಕಿಯ ಮಾರಿ
ಆರು ಕಾಸಿಗೊಂದು ಗಡಗೆಯ ಮಾರಿ
ಮೂರು ಕಾಸಿಗೊಂದು ಕುಡಕಿಯ ಮಾರಿ
ಆರು ಕಾಸಿಗೊಂದು ಗಡಗೆಯ ಮಾರಿ
ವಸುದೆಯೊಳು ಶಿಶುನಾಳಧೀಶನ
ಮುಂದೆ ಧ್ಯಾನದ ಮಗಿಯೊಂದು ಇಡುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಕುಂಬಾರಕಿ ಈಕೀ ಕುಂಬಾರಕಿ
ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವಾಕಿ
ಕುಂಬಾರಕಿ ಈಕೀ ಕುಂಬಾರಕಿ
ಈ ಬ್ರಹಾಂಡವೆಲ್ಲ ತುಂಬಿಕೊಂಡಿರುವಾಕಿ
ಕುಂಬಾರಕಿ ಈಕೀ ಕುಂಬಾರಕಿ