Оберіть трек для відтворення

Сингл / Трек
ಜೋ ಲಾಲಿ
ಜೋ ಜೋ
ಜೋ ಜೋ
ಜೋಲೀ ತೂಗೋ ಕೈಯಲ್ಲಿದೆ..
ಬಂಗಾರದ ಬೊಂಬೆ..l
ಆ ಚಂದ್ರನೇ ಈ ರಾತ್ರಿಗೆ..
ದೃಷ್ಟಿಗೊಂದು ನಿಂಬೆ..ll
ನೀನು ಇಡೋ ಪ್ರತಿ ಅಂಬೆಗಾಲಲ್ಲಿ
ಗೆಜ್ಜೆಯಾಗಿ ಹಾಡುವೆ..
ನೀನು ಹಾಡೋ ಪ್ರತಿ ತೊದಲು ಮಾತಲ್ಲಿ
ನನ್ನ ನಾಳೆಗಳ ಕಾದಿರಿಸುವೇ..ll
ನೀನು ಚೆಲ್ಲೋ ಈ ನಗುವಿಂದಲೇ.
ಹೆತ್ತ ತಾಯಿ ಎದೆ ಬೆಳದಿಂಗಳು..l
ಪುಟ್ಟ ಪುಟ್ಟ ಕೈ ಸನ್ನೆಗಳೇ
ದಾರಿದೀಪ ನಂಗೆ ಯಾವಾಗಲೂ..ll
ಬೀಸೋ ಗಾಳಿ ಲಾಲಿ
ಹಾಡು ಬಾರೆ..
ನನ್ನೀ ಕಂದಮ್ಮ ಖುಷಿಯಾಗಲಿ..l
ಓಡೋ ಮೋಡ ಗಂಧ
ಹಚ್ಚು ಬಾರೆ..
ಹಾಯಾಗಿ ಅಂಬರ ಘಮ್ಮೆನ್ನಲಿ..ll
ಜೋಲೀ ತೂಗೋ ಕೈಯಲ್ಲಿದೆ..
ಬಂಗಾರದ ಬೊಂಬೆ..l
ಆ ಚಂದ್ರನೇ ಈ ರಾತ್ರಿಗೆ..
ದೃಷ್ಟಿಗೊಂದು ನಿಂಬೆ..ll"