Оберіть трек для відтворення
ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೆ
ಏ, ಹುಡುಗಾ ನೀ ನನ್ನ ಪ್ರಾಣ ಕಣೋ
ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೆ
ನಂಗೂ ನಿಂಗೂ ಇನ್ನೂ ಹೊಸದು, ಇಂಥ ಅನುಭವ
ಕಂಡು ಕಂಡು ಎದೆಯಾ ಒಳಗೆ, ಏನೋ ಕಲರವ
ಸದಾ, ಸದಾ ವೈಯ್ಯಾರದ, ಪದ, ಪದ ಬೆಸೆದಿದೆ
ಹೊಸ, ಹೊಸ, ಶೃಂಗಾರದ, ರಸರಾಗ ಲಹರಿಯ ಹರಿಸುತಿದೆ
ಓ ಒಲವೇ, ಒಲವೆಂಬ ಒಲವಿಲ್ಲಿದೆ
ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೆ
ಪ್ರೀತಿ ಒಂದು ಗಾಳಿಯ ಹಾಗೆ, ಗಾಳಿ ಮಾತಲ್ಲ
ಪ್ರೀತಿ ಹರಿಯೋ ನೀರಿನ ಹಾಗೆ, ನಿಂತ ನೀರಲ್ಲ
ಅದು, ಒಂದು, ಜ್ಯೋತಿಯ ಹಾಗೆ
ಸುಡೋ, ಸುಡೋ ಬೆಂಕಿಯಲ್ಲ
ಅದು, ಒಂದು, ಭುವಿಯ ಹಾಗೆ
ನಿರಂತರ ಈ ಪ್ರೇಮಸ್ವರ
ಈ, ಪ್ರೀತಿ, ಆಕಾಶಕ್ಕೂ ಎತ್ತರ
ಹೋ,ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೆ
ಏ, ಹುಡುಗೀ ನೀ ನನ್ನ ಪ್ರಾಣ ಕಣೇ