Оберіть трек для відтворення

Сингл / Трек
ಪೂಜಿಸಲೆಂದೇ ಹೂಗಳ ತಂದೆ
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾನಿಂದೆ
ತೆರೆಯೋ ಬಾಗಿಲನು ರಾಮ
ತೆರೆಯೋ ಬಾಗಿಲನು ರಾಮ
ಪೂಜಿಸಲೆಂದೇ ಹೂಗಳ ತಂದೆ
ಮೋಡದ ಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮೋಡದ ಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರತಿ... ಆಆಆಆ
ಮಾಣಿಕ್ಯದಾರತಿ ಉಷೆ ತಂದಿಹಳೂ
ತಾಮಸವೇಕಿನ್ನು ಸ್ವಾಮಿ
ತೆರೆಯೋ ಬಾಗಿಲನು ರಾಮ
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾನಿಂದೆ
ಪೂಜಿಸಲೆಂದೇ ಹೂಗಳ ತಂದೆ
ಒಲಿದರು ಚೆನ್ನ ಮುನಿದರು ಚೆನ್ನ
ನಿನ್ನಾಸರೆಯೇ ಬಾಳಿಗೆ ಚೆನ್ನ
ಒಲಿದರು ಚೆನ್ನ ಮುನಿದರು ಚೆನ್ನ
ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ
ಸ್ವೀಕರಿಸು ನನ್ನ ಸ್ವಾಮಿ
ತೆರೆಯೋ ಬಾಗಿಲನು ರಾಮ
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾನಿಂದೆ
ತೆರೆಯೋ ಬಾಗಿಲನು ರಾಮ
ಪೂಜಿಸಲೆಂದೇ