Оберіть трек для відтворення
ನೀ ಮಾಯೆಯೊಳಗೋ, ಮಾಯೆ ನಿನ್ನೊಳಗೋ?
ನೀ ದೇಹದೊಳಗೋ, ದೇಹ ನಿನ್ನೊಳಗೋ?
ನೀ ಕನಸಿನೊಳಗೋ, ಕನಸು ನಿನ್ನೊಳಗೋ?
ನೀ ಅಮಲಿನೊಳಗೋ, ಅಮಲು ನಿನ್ನೊಳಗೋ?
ಮನಸು, ದೇಹಗಳೆರಡೂ ಸೆಳೆಯುವ ಸುಳಿಯಂತಿರುವ ಪ್ರೇಮದೊಳಗೋ?
ನೀ ತೊರೆದ ಘಳಿಗೆಯಲಿ ನನ್ನೆದಯ ತುಂಬಾ ನಿನ್ನ ಗುರುತು
ನೆನಪುಗಳ ಮಳಿಗೆಯಲಿ ಇನ್ಯಾರೂ ಇಲ್ಲ ನಿನ್ನ ಹೊರೆತು
ಒಂಟಿ ಮೋಡದ ಕಣ್ಣ ಹನಿಯ ದೂರದಿಂದಲೇ ನೋಡು, ಇನಿಯ
ಕಾಣದಿದ್ದರೂ ಕಾಡುತಿರುವ, ಕೇಳದಿದ್ದರೂ ಹೇಳುತಿರುವ ಹೃದಯದ ತಾಳಕೆ
ಹಾಡುತಿರುವ, ಹಾಡುತಿರುವ, ನೀ ಯಾರೋ? ಯಾರೋ? ಯಾರೋ?
ಈ ಪ್ರೀತಿಯೇ ಮಾಯೆ, ನಗುವಾಗಲೂ ನೋವೇ
ಏಕಾಂತದ ಛಾಯೆ ಹಗಲಿರುಳು ಕಾಡಿದೆ
ಮೊದಲೇ ರಗಳೆ ಪ್ರೀತಿ ಪದವೇ
ಎಂದಿಗೆ ಬರುವೆಯೋ ತಿಳಿಯದೆ ನನ್ನೆದೆ
ಹೃದಯದ ಬಡಿತವೇ ನಿಂತಂತಾಗಿದೆ
ನೀನು ಮರೆಯಾದ ಮರು ಘಳಿಗೆ ಮನಸು ಬಯಸಿದೆ ಸಾನಿಧ್ಯ
ಮತ್ತೆ ಸೇರಲು ನಿನ್ನೊಳಗೆ ರಾಜಿಯಾಗುತಿದೆ ಆಂತರ್ಯ
ನಾವಿಕನಿಲ್ಲದ ದೋಣಿ ಇದು, ಒಂಟಿ ಸಾಗುವ ಯಾತನೆಯೋ?
ನೆರಳನು ಹಿಡಿಯುವ ಆಟವಿದು ಇನ್ನು ಸಾಕೆನುವ ಪ್ರಾರ್ಥನೆಯೋ?
ನೀ ಮಾಯೆಯೊಳಗೋ, ಮಾಯೆ ನಿನ್ನೊಳಗೋ?
ನೀ ದೇಹದೊಳಗೋ, ದೇಹ ನಿನ್ನೊಳಗೋ?
ಮನಸು, ದೇಹಗಳೆರಡೂ ಸೆಳೆಯುವ ಸುಳಿಯಂತಿರುವ ಪ್ರೇಮದೊಳಗೋ?
ನೀ ಕನಸಿನೊಳಗೋ, ಕನಸು ನಿನ್ನೊಳಗೋ?
ನೀ ಅಮಲಿನೊಳಗೋ, ಅಮಲು ನಿನ್ನೊಳಗೋ?
ಅಮಲಿನಲ್ಲಿ ಕಂಡ ಕನಸಿನಲ್ಲೂ ಸಿಗುವ ಪ್ರೀತಿ, ಸೋಲಿನೊಳಗೋ?
ನೀ ತೊರೆದ ಘಳಿಗೆಯಲಿ ನನ್ನೆದಯ ತುಂಬಾ ನಿನ್ನ ಗುರುತು
ನೆನ ಪುಗಳ ಮಳಿಗೆಯಲಿ ಇನ್ಯಾರೂ ಇಲ್ಲ ನಿನ್ನ ಹೊರೆತು
ಒಂಟಿ ಮೋಡದ ಕಣ್ಣ ಹನಿಯ ದೂರದಿಂದಲೇ ನೋಡು, ಇನಿಯ
ಕಾಣದಿದ್ದರೂ ಕಾಡುತಿರುವ, ಕೇಳದಿದ್ದರೂ ಹೇಳುತಿರುವ ಹೃದಯದ ತಾಳಕೆ
ಹಾಡುತಿರುವ, ಹಾಡುತಿರುವ, ನೀ ಯಾರೋ? ಯಾರೋ? ಯಾರೋ?