Оберіть трек для відтворення
Сингл / Трек
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದ ಹೊತ್ತು
ನೀನಿಲ್ಲದ ಹೊತ್ತು
ನಾ ಹೇಗೆ ಕಳೆಯಲೇಳು
ಪಲ್ಲವಿ ಇಲ್ಲದ ಚರಣ
ನೇಸರನಿಲ್ಲದ ಗಗನ
ಮೋಡದೊಳಗೆ ಸೂರ್ಯ
ಇದ್ದರೂ ಬೆಳಗನೇನು
ಮನಸಿನೊಳಗೆ ನಾನು
ನೆನಪಾಗಿ ಉಳಿಯಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದ ಹೊತ್ತು
ನೀನಿಲ್ಲದ ಹೊತ್ತು
ನಾ ಹೇಗೆ ಕಳೆಯಲೇಳು
ಅಂದು ಕೊಂಡಂಗೆಲ್ಲ ಜೀವನ ಸಾಗದು ಗೆಳೆಯ
ವಿಧಿಯಾ ಆಟ
ಬ್ರಹ್ಮ ಗೀಚಿದ ಬರಹಕೆ ಮುಂದಾಲೋಚನೆಯೇ ಇಲ್ಲ
ಮನಸೂ ಇಲ್ಲ
ಓ ಹೂಗಳೇ
ನಿಮ್ಮಂತೆಯೇ ನಾನು
ಹೂಗಳಂತೆ ನಾನು
ನಿಮಗಾಗಿ ಬಾಳಲೇನು
ಮೇಣದಂತೆ ಅಳದೆ
ನಗುತಾ ಬೆಳಗಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದ ಹೊತ್ತು
ನೀನಿಲ್ಲದ ಹೊತ್ತು
ನಾ ಹೇಗೆ ಕಳೆಯಲೇಳು
ಮುಂದೇನೋ ಅಂತ ಅರಿಯದೆ ತಪ್ಪು ಮಾಡಿದೆ ನಾನು
ಹಡೆದೇ ಇವನನ್ನು
ತಾಯಿ ಗರ್ಭವೇ ಕಂದನಿಗೆ ಕವಚ ಅಲ್ಲವೇ
ಯಾಕೆ ಹಡೆದೆ
ಓ ಹೂಗಳೇ
ನಿಮ್ಮಂತೆಯೇ ನಾನು
ಹೂಗಳಂತೆ ನಾನು
ನಿಮಗಾಗಿ ಬಾಳಲೇನು
ಮೇಣದಂತೆ ಅಳದೆ
ನಗುತಾ ಬೆಳಗಲೇನು
ಈ ಪ್ರೀತಿಯಾ ಮರೆತು
ಈ ಪ್ರೀತಿಯಾ ಮರೆತು
ಬಾಳೋದು ಹೇಗೆ ಹೇಳು
ನೀನಿಲ್ಲದ ಹೊತ್ತು
ನಾ ಹೇಗೆ ಕಳೆಯಲೇಳು