Оберіть трек для відтворення
ವಿಧಿ ಬರಹ ಎಂಥ ಘೋರ
ಪ್ರೇಮಿಗಳು ದೂರ ದೂರ
ಹಸಿರಾಗೋ ಪ್ರೇಮ ಕಥೆಗೆ
ವಿಷವಾಗೋ ಜಗವು ಕ್ರೂರ
ಬದುಕು ಪ್ರತಿ ಘಳಿಗೆ
ಒಲವ ಸುಳಿಯೊಳಗೆ
ಏಕೋ ಇಂಥ ಸಮರ
ವಿಧಿ ಬರಹ ಎಂಥ ಘೋರ
ಪ್ರೇಮಿಗಳು ದೂರ ದೂರ
ನೀನೆ ಜೀವ ನೀನೆ ಭಾವ ಅನ್ನೋ ಮಾತಿಗೆ
ಮಾತು ನೀಡಿ ಮನಸೂ ನೀಡಿ ಹಾಡೋ ಪ್ರೀತಿಗೆ
ಸನಿಹ ವಿರಹ ಕಲಹ ಹಣೆಯ ಬರಹ
ವಿಧಿ ಬರಹ ಎಂಥ ಘೋರ
ಪ್ರೇಮಿಗಳು ದೂರ ದೂರ
ಹಸಿರಾಗೋ ಪ್ರೇಮ ಕಥೆಗೆ
ವಿಷವಾಗೋ ಜಗವು ಕ್ರೂರ
ನೋವು ನಲಿವು ಸೋಲು ಗೆಲುವು ಉಂಟು ಪ್ರೀತಿಗೆ
ಯಾರೋ ಬಂಧು ಯಾರೋ ಬಳಗ ಬಾಳ ಪಯಣಕೆ
ಕನಸೋ ಭ್ರಮೆಯೋ ಜಗವೇ ಕುರುಡಾಗಿದೆ
ವಿಧಿ ಬರಹ ಎಂಥ ಘೋರ
ಪ್ರೇಮಿಗಳು ದೂರ ದೂರ
ಹಸಿರಾಗೋ ಪ್ರೇಮ ಕಥೆಗೆ
ವಿಷವಾಗೋ ಜಗವು ಕ್ರೂರ
ಬದುಕು ಪ್ರತಿ ಘಳಿಗೆ
ಒಲವ ಸುಳಿಯೊಳಗೆ
ಏಕೋ ಇಂಥ ಸಮರ